ಬೆಂಗಳೂರು : ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರು ವಾಗ್ದಾಳಿ ನಡೆಸುವುದು ಸಾಮಾನ್ಯ ಸದ್ಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಟ್ವಿಟ್ಟರ್ ಮೂಲಕ ವಾಗ್ದಳಿ ಮುಂದುವರೆಸಿದೆ.
ಸಿದ್ದುಗೆ ಐದು ಪ್ರಶ್ನೆಗಳ ಸವಾಲು ಎಸೆದಿರುವ ಬಿಜೆಪಿ ಸರಿಯಾಗಿಯೇ ಲಾಕ್ ಮಾಡಿದೆ.
ನಿಮ್ಮ ಆಡಳಿತದಲ್ಲಿ ಪ್ರತಿ 4 ಗಂಟೆಗೆ ಒಬ್ಬ ದಲಿತನ ಮೇಲೆ ದೌರ್ಜನ್ಯ ಪ್ರತಿ 5 ದಿನಕ್ಕೆ ಒಬ್ಬ ದಲಿತನ ಕೊಲೆ ಇಷ್ಟೆಲ್ಲಾ ಆಗುತ್ತಿದ್ದರೂ, ನೀವು ಮಾತ್ರ ಓಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಮಜವಾದಿಯಂತೆ ಕಾಲ ಕಳೆಯುತ್ತಿದ್ದಿರಿ ! ನಿಮ್ಮ ದಲಿತ ಪ್ರೇಮ ಕೇವಲ ನಾಟಕವಲ್ಲವೇ ಎಂದು ಬಿಜೆಪಿ ಪ್ರಶ್ನೆಸಿದೆ.
ನಿಮ್ಮದೇ ಪಕ್ಷದ ದಲಿತ ಶಾಸಕನ ಮನೆಗೆ ಮತಾಂಧರು ಬೆಂಕಿಯಿಟ್ಟರು. ನೀವು ಮಾಡಿದ್ದಾದರೂ ಏನು? ದಲಿತ ಶಾಸಕನನ್ನು ರಕ್ಷಿಸುವುದನ್ನು ಬಿಟ್ಟು ಗಲಭೆಯಲ್ಲಿ ಭಾಗಿಯಾದವರಿಗೆ ಅಮಾಯಕರು ಎಂದು ಸರ್ಟಿಫಿಕೇಟ್ ನೀಡಿದಿರಿ.
ಮತಾಂಧರ ಮೇಲೆ ಇರುವಷ್ಟು ಪ್ರೇಮ ದಲಿತರ ಮೇಲೇಕಿಲ್ಲ ಸಿದ್ದರಾಮಯ್ಯ? ಎಂದು ಕಿಡಿಕಾರಿದೆ.
ಇನ್ನೂ ಮುಂದುವರೆದು ನಡೆಸಿರುವ ಟ್ವೀಟ್ ಪ್ರಶ್ನೆಗಳನ್ನಾ ನೀವೆ ನೋಡಿ.
PublicNext
26/10/2020 06:46 pm