ಬೆಂಗಳೂರು: ಸದ್ಯ ರಾಜ್ಯದಲ್ಲಿ ಕೊರೊನಾ ಮಧ್ಯೆಯೂ ಭರ್ಜರಿಯಾಗಿ ಬೈ ಎಲೆಕ್ಷನ್ ಪ್ರಚಾರ ಕಾರ್ಯ ನಡೆಯುತ್ತಿದೆ.
ಅಕಾಡದಲ್ಲಿರುವ ಅಭ್ಯರ್ಥಿ ಪರ ಮತಯಾಚನೆಯಲ್ಲಿರುವ ರಾಜಕೀಯ ದಿಗ್ಗಜರು ಒಬ್ಬರ ಮೇಲೊಬ್ಬರು ಜಾತಿ ರಾಜಕಾರಣದ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.
ಸದ್ಯ ಆರ್ ಆರ್ ನಗರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಸೋಮವಾರ ಕೈಗೊಂಡಿದ್ದ ಪ್ರಚಾರದಲ್ಲಿ ಮಾತನಾಡಿದ ಸದಾನಂದಗೌಡ, ಆರ್ಆರ್ ನಗರ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷರು ಜಾತಿ ರಾಜಕೀಯ ಮಾಡ್ತಿದ್ದಾರೆ.
ಜಾತಿ ಮೇಲೆ ಡಿಕೆಶಿ ಬಂಡವಾಳ ಹೂಡಿದ್ದಾರೆ. ನಾನು, ಅಶ್ವಥ ನಾರಾಯಣ, ಸೋಮಶೇಖರ್, ನಾರಾಯಣಗೌಡ, ಆರ್. ಶೋಕ್ ಎಲ್ಲರೂ ಒಕ್ಕಲಿಗರೇ… ಆದ್ರೆ ನಾವು ಅಭಿವೃದ್ಧಿ ಮೇಲೆ ರಾಜಕಾರಣ ಮಾಡ್ತೀವಿ.
ಡಿಕೆಶಿ ಜಾತಿ ಮೇಲೆ ಚುನಾವಣೆ ಮಾಡೋಕೆ ಹೊರಟಿದ್ದಾರೆ ಎಂದು ಕಿಡಿಕಾರಿದರು.
ದೇವೇಗೌಡರ ಹಾದಿಯನ್ನೇ ಡಿಕೆಶಿ ತುಳಿದಿದ್ದಾರೆ. ದೇವೇಗೌಡರು ಮತ್ತು ಡಿಕೆಶಿ ನಡುವೆ ಜಾತಿ ವಿಚಾರದಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಈ ಜಾತಿ ರಾಜಕೀಯಕ್ಕೆ ಜನ ಉತ್ತರ ಕೊಡಬೇಕು.
ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೆ ಮುನಿರತ್ನ ಬಿಜೆಪಿಗೆ ಸೇರಿದ್ರು. ಅಭಿವೃದ್ಧಿ ನೋಡಿ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
PublicNext
26/10/2020 05:30 pm