ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಮ್ ಇದ್ರೆ ಕೇಂದ್ರದಿಂದ ಪರಿಹಾರ ತನ್ನಿ; ಸಿದ್ದರಾಮಯ್ಯ

ಕಲಬುರಗಿ: ನಿಮಗೆ ದಮ್ ಇದ್ರೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಕುಳಿತು ರಾಜ್ಯಕ್ಕೆ ಪರಿಹಾರ ತನ್ನಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಡಿಸಿಎಂ ಅಶ್ವತ್ಥ ನಾರಾಯಣ ಅವರಿಗೆ ಸವಾಲು ಹಾಕಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಸಿದ್ದರಾಮಯ್ಯ ಮಾತನಾಡಿದರು.

ಪ್ರವಾಹ ಸಂತ್ರಸ್ಥರಿಗೆ ಇನ್ನೂ ಒಂದು ನಯಾ ಪೈಸೆ ಪರಿಹಾರ ಬಂದಿಲ್ಲ‌. ರಾಜ್ಯದಲ್ಲಿ 25 ಸಂಸದರಿದ್ದರೂ ಪ್ರಯೋಜನವಿಲ್ಲ‌. ಸಿಎಂ ಯಡಿಯೂರಪ್ಪ ನೆರೆ ಪೀಡೀತ ಪ್ರದೇಶಗಳ್ಲಿ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಆದ್ರೆ ಅದರ ಫಲ ಏನು? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಡಿಸಿಎಂ ಅಶ್ವತ್ಥ ನಾರಾಯಣ ಅವರಿಗೆ ಧಮ್ ಇದ್ರೆ ಪ್ರಧಾನಿಗಳ ಬಳಿ ಹೋಗಿ ರಾಜ್ಯದ ಸ್ಥಿತಿ ಮನವರಿಕೆ ಮಾಡಿಕೊಟ್ಟು ಪರಿಹಾರ ತರಲಿ ಎಂದು ಸವಾಲು ಹಾಕಿದ್ರು.

ಯಡಿಯೂರಪ್ಪ ಈ ಮುಂಚೆ ಚೆಕ್ ಮೂಲಕ ಲಂಚ ಪಡೆಯುತ್ತಿದ್ದರು. ಈಗ ಅವರ ಮಗ ಆರ್ ಟಿ ಜಿ ಎಸ್ ಮೂಲಕ ಲಂಚ ಪಡೆಯುತ್ತಿದ್ದಾರೆ. ಇದು ಜನವಿರೋಧಿ ಸರ್ಕಾರ ಎಂದು ಸಿದ್ದರಾಮಯ್ಯ ಟೀಕಿಸಿದರು.

Edited By : Nagaraj Tulugeri
PublicNext

PublicNext

25/10/2020 03:43 pm

Cinque Terre

53.66 K

Cinque Terre

9

ಸಂಬಂಧಿತ ಸುದ್ದಿ