ಕೊಪ್ಪಳ: ಸಭೆಯಲ್ಲಿ ಸುಮ್ಮನೆ ಬಾಯಿ ಮುಚ್ಚಿ ಕುಳಿತುಕೊಂಡು, ಉತ್ತರನ ಪೌರುಷದಂತೆ ಹೊರಗೆ ಬಂದು ಹೇಳಿಕೆ ನೀಡುತ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಶಾಸನ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಿಡಿಕಾರಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿ ಬಹಳ ದಿನ ಉಳಿಯುವುದಿಲ್ಲ. ಕೇಂದ್ರ ಸರ್ಕಾರದವರಿಗೂ ಬಿಎಸ್‌ವೈ ಸಾಕಾಗಿ ಹೋಗಿದ್ದಾರೆ ಎಂಬ ಯತ್ನಾಳ್ ಅವರ ಹೇಳಿಕೆಗೆ ಕೆ.ಎಸ್.ಈಶ್ವರಪ್ಪ ಅವರು ಕೊಪ್ಪಳದಲ್ಲಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
'ಯತ್ನಾಳ್ ಅವರಿಗೆ ಕಾರಣ ನೀಡದೇ ಪಕ್ಷದಿಂದ ಉಚ್ಛಾಟಿಸಬೇಕು. ಇತ್ತೀಚೆಗೆ ನಡೆದ ಶಾಸಕಾಂಗ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಎಲ್ಲ ಶಾಸಕರಿಗೂ ನಿಮ್ಮ ಕ್ಷೇತ್ರದ ಸಮಸ್ಯೆ ಏನು ಅಂತ ಕೇಳಿ, ಬಗೆಹರಿಸಿಕೊಳ್ಳುವಂತೆ ಹೇಳಿದ್ದರು. ಸಭೆಯಲ್ಲಿ ಸುಮ್ಮನೆ ಬಾಯಿ ಮಚ್ಚಿ ಕುಳಿತುಕೊಂಡು ಬಳಿಕ ಹೊರಗೆ ಬಂದು ಉತ್ತರನ ಪೌರುಷದಂತೆ ಹೇಳಿಕೆ ನೀಡುತ್ತಾರೆ' ಎಂದು ಈಶ್ವರಪ್ಪ ಗುಡುಗಿದರು.
PublicNext
21/10/2020 05:46 pm