ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಜೆಹಳ್ಳಿ ಗಲಭೆಯ ಬಗ್ಗೆ ಯಾರೂ ವಿಚಲಿತರಾಗಬೇಕಿಲ್ಲ: 'ಕೈ' ನಾಯಕರಿಗೆ ಡಿಕೆಶಿ ಅಭಯ

ಬೆಂಗಳೂರು: ಡಿಜೆಹಳ್ಳಿ ಗಲಭೆಗೆ ಪೊಲೀಸರ ವೈಫಲ್ಯವೇ ಕಾರಣ, ಪೊಲೀಸರು ಸರ್ಕಾರದ ತಾಳಕ್ಕೆ ಕುಣಿಯುತ್ತಿದ್ದಾರೆ. ಇದು ಬಿಜೆಪಿ ನಡೆಸುತ್ತಿರುವ ಕುತಂತ್ರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.

ಡಿ.ಜೆ.ಹಳ್ಳಿ, ಕೆ.ಜಿಹಳ್ಳಿ ಗಲಭೆ ಪ್ರಕರಣದ ಸಂಬಂಧ ಕಾಂಗ್ರೆಸ್​ನ ಮಾಜಿ ಮೇಯರ್​ ಸಂಪತ್​ಕುಮಾರ್​ ಅವರು ಗಲಭೆಕೋರರ ನಡುವೆ ನಡೆಸಿರುವ ಕಾಲ್​ ರೆಕಾರ್ಡ್​ಗಳು ಲೀಕ್​ ಆಗಿದೆ. ಈ ಬೆನ್ನಲ್ಲೇ ಡಿ.ಕೆ.ಶಿವಕುಮಾರ್​ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ.

'ಸಂಪತ್ ರಾಜ್ ಫೋನ್​ಕಾಲ್ ಡಿಟೇಲ್ ಲೀಕ್ ಆಗಿದ್ದು ಹೇಗೆ? ತಮ್ಮ ವೈಫಲ್ಯಗಳನ್ನು ಮುಚ್ಚುದಕ್ಕೆ ಬಿಜೆಪಿ ನಾಯಕರು ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ಮೊದಲೇ ಕಾಲ್​ ರೆಕಾರ್ಡ್​ಗಳನ್ನು ಲೀಕ್​ ಮಾಡಿದರೆ ತನಿಖೆ ನಡೆಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಈ ಘಟನೆಯಿಂದ ಯಾರೂ ವಿಚಲಿತರಾಗಬೇಕಿಲ್ಲ. ಪಕ್ಷ ಹೆದರುವ ಪ್ರಶ್ನೆಯೇ ಇಲ್ಲ ಎಂದು ಅಭಯ ನೀಡಿದ್ದಾರೆ.

Edited By : Vijay Kumar
PublicNext

PublicNext

20/10/2020 02:57 pm

Cinque Terre

93.12 K

Cinque Terre

6

ಸಂಬಂಧಿತ ಸುದ್ದಿ