ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಣ್ಣೆ ಏಟು-ವರನ ಎಡವಟ್ಟು-ಸರಿಯಾಗಿಯೇ ಬಿತ್ತು ಏಟು!

ಬಿಹಾರ; ಮದುವೆ ಅಂದ್ಮೇಲೆ ಅಲ್ಲಿ ಖುಷಿ ಇರುತ್ತದೆ. ಆ ಖುಷಿಯಲ್ಲಿ ತಾಳಿಕಟ್ಟೋ ಹಿಂದಿನ ದಿನ ಒಂಚೂರು ಎಣ್ಣೆ ಹೊಡೆಯೋರು ಇರ್ತಾರೆ. ಆದರೆ, ಇಲ್ಲೊಬ್ಬ ಆಸಾಮಿ ವಧುವಿಗೆ ಮಾಲೆ ಹಾಕೋ ಟೈಮ್‌ ನಲ್ಲಿಯೇ ಫುಲ್ ಟೈಟ್ ಆಗಿದ್ದಾನೆ. ವಧುವಿಗೆ ಹಾಕೋ ಹಾರವನ್ನ ಅವಳ ತಂಗಿಗೆ ಹಾಕಿ ಸರಿಯಾಗಿಯೇ ಒದೆ ತಿಂದಿದ್ದಾನೆ.

ಹೌದು. ಈ ಒಂದು ಘಟನೆ ನಡೆದಿರೋದು ಬಿಹಾರದಲ್ಲಿ. ಇಲ್ಲಿ ಮದ್ಯಪಾನ ನಿಷೇಧ ಇದೆ. ಆದರೂ ಮದುವೆ ಟೈಮ್‌ ನಲ್ಲಿ ವರ ಕಂಠಪೂರ್ತಿ ಕುಡಿದಿದ್ದಾನೆ. ಕುಡಿದ ಅಮಲಿನಲ್ಲಿಯೇ ವಧುಗೆ ಹಾಕೋ ಹಾರವನ್ನ ಅವಳ ಪಕ್ಕ ನಿಂತ ಅವಳ ತಂಗಿಗೆ ಹಾಕಿ ಬಿಟ್ಟಿದ್ದಾನೆ.

ಇದರಿಂದ ಕೆಂಡಾಮಂಡಲವಾದ ವಧುವಿನ ಸಹೋದರಿ ಸರಿಯಾಗಿಯೇ ಕಪಾಳಕ್ಕೆ ಹೊಡೆದಿದ್ದಾಳೆ. ಹಾಕಿರೋ ಮಾಲೆಯನ್ನ ತೆಗೆಯುವವರೆಗೂ ವರನ ಕಪಾಳಕ್ಕೆ ಬಾರಿಸಿದ್ದಾಳೆ. ಮಾಲೆ ತೆಗೆದ ಮೇಲೆ ವಧುವಿಗೆ ವರ ಮಾಲೆ ಹಾಕಿದ್ನೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

Edited By :
PublicNext

PublicNext

26/06/2022 08:03 pm

Cinque Terre

153.77 K

Cinque Terre

11

ಸಂಬಂಧಿತ ಸುದ್ದಿ