ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಜನಾದ್ರಿಯ 575 ಮೆಟ್ಟಿಲೇರಿ ಆಂಜನೇಯನ ದರುಶನ ಪಡೆದ ಮೈಸೂರು ಮಹಾರಾಜ !

ಕೊಪ್ಪಳ: ಮೈಸೂರು ಮಹಾರಾಜ ಯದುವೀರ್ ಒಡೆಯರ್ ಮತ್ತು ರಾಜಕುಮಾರಿ ಶ್ರೀಮತಿ ತ್ರಿಶಿಕಾ ಕುಮಾರಿ ಇಂದು ಗಂಗಾವತಿ ತಾಲೂಕಿನ ಅಂಜನಾದ್ರಿಯ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದಾರೆ.

ಆಂಜನೇಯ ಹುಟ್ಟಿದ ಸ್ಥಳ ಎಂದೇ ಕರೆಯೋ ಈ ಅಂಜನಾದ್ರಿ ಬೆಟ್ಟಕ್ಕೆ ಬಂದ ಮಹಾರಾಜರು, ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಹಂಪಿ ಪ್ರವಾಸದ ಹಿನ್ನೆಲೆಯಲ್ಲಿಯೇ ಯದುವೀರ್ ಕುಟುಂಬ ಈ ಕಡೆಗೆ ಬಂದಿದೆ. ಹಾಗೇನೆ ಕೊಪ್ಪಳಕೂ ಬಂದು ಅಂಜನಾದ್ರಿ ಬೆಟ್ಟದ 575 ಮೆಟ್ಟಿಲನ್ನೂ ಹತ್ತಿ ಆಂಜನೇಯನ ದರುಶನ ಪಡೆದಿದ್ದಾರೆ.

ಆಂಜನೇಯ ಹುಟ್ಟಿದ ಈ ಸ್ಥಳಕ್ಕೆ ನಾನು ಎರಡನೇ ಬಾರಿ ಭೇಟಿ ಕೊಟ್ಟಿದ್ದೇನೆ. ಈ ಜಾಗ ತುಂಬಾ ಅದ್ಭುತವಾಗಿಯೇ ಇದೆ. ಎಲ್ಲರಿಗೂ ಒಳ್ಳೆಯದಾಗಲಿ ಅಂತಲೇ ಪ್ರಾರ್ಥನೆ ಮಾಡುತ್ತೇನೆ ಎಂದು ಯದುವೀರ್ ಮಾಧ್ಯಮಕ್ಕೂ ಇದೇ ಸಮಯದಲ್ಲಿ ತಿಳಿಸಿದ್ದಾರೆ.

Edited By :
PublicNext

PublicNext

27/06/2022 10:29 am

Cinque Terre

37.74 K

Cinque Terre

1