ಹೊಸದಿಲ್ಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ನೂತನ ಅಧ್ಯಕ್ಷರಾಗಿ ಪಿ.ಡಿ.ವಘೇಲಾ ನೇಮಕರಾಗಿದ್ದಾರೆ.
ವಘೇಲಾ ಅವರು 1986ನೇ ಬ್ಯಾಚಿನ, ಗುಜರಾತ್ ಕೇಡರ್ ನ ಐಎಎಸ್ ಅಧಿಕಾರಿ ಸೇವೆಗೆ ಸೇರ್ಪಡೆಯಾಗಿದ್ದರು.
ಇದೀಗ ಇವರನ್ನು ಮೂರು ವರ್ಷಗಳ ಅವಧಿಗೆ ಅಥವಾ 65 ವರ್ಷ ವಯಸ್ಸಾಗುವವರೆಗೆ ಟ್ರಾಯ್ ಅಧ್ಯಕ್ಷರನ್ನಾಗಿ ನೇಮಿಸಿ ಸೆ.28ರಂದು ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
ಸೆ. 30ರಂದು ಪಿ.ಡಿ. ವಘೇಲಾ ಅವರು ಟ್ರಾಯ್ನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಪಿ.ಡಿ. ವಘೇಲಾ ಅವರು ಪ್ರಸ್ತುತ ರಾಸಾಯನಿಕಗಳು ಮತ್ತು ರಸಗೊಬ್ಬರ ಇಲಾಖೆಯಡಿ ಬರುವ ಫಾರ್ಮಾಸುಟಿಕಲ್ ವಿಭಾಗದ ಕಾರ್ಯದರ್ಶಿಯಾಗಿ ಸೇವೆಯಲ್ಲಿದ್ದರು.
PublicNext
29/09/2020 03:07 pm