ನವದೆಹಲಿ : ದೇಶವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಹೊಸ ಹೊಸ ಪ್ರಯೋಗಳನ್ನು ಮಾಡುವುದರೊಂದಿಗೆ ಬಲಿಷ್ಠ ಶಸ್ತ್ರಾಸ್ತ್ರ ಖರೀದಿಗೂ ಸರ್ಕಾರ ಮುಂದಾಗಿದೆ.
ಎಸ್.. ಗಡಿಯಲ್ಲಿ ದೇಶದ ರಕ್ಷಣೆಗಾಗಿ ಶ್ರಮಿಸುತ್ತಿರುವ ಸೈನಿಕರ ಕೈಗೆ ಬಲಿಷ್ಠವಾದ ಅಸ್ತ್ರಗಳನ್ನು ನೀಡಲು ಸರ್ಕಾರ ಕೋಟಿ ಕೋಟಿ ಹಣ ವಿನಿಯೋಗಿಸಲು ಮುಂದಾಗಿದೆ.
ರಕ್ಷಣಾ ಸಚಿವಾಲಯದ ಅತ್ಯುನ್ನತ ನಿರ್ಧಾರ ಘಟಕವಾದ ಡಿಎಸಿ(ಡಿಫೆನ್ಸ್ ಅಕ್ವಿಷನ್ ಕೌನ್ಸಿಲ್ ಅಥವಾ ರಕ್ಷಣಾ ಖರೀದಿ ಮಂಡಳಿ) ಭೂ ಸೇನೆ, ವಾಯುಪಡೆ ಮತ್ತು ನೌಕದಳಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಸಾಧನಗಳನ್ನು ಖರೀದಿಸುವ 2290 ಕೋಟಿ ರೂ.ಗಳ ಪ್ರಸ್ತಾವನೆಗೆ ಸಮ್ಮತಿ ನೀಡಿದೆ.
ಅಮೆರಿಕದಿಂದ ಅತ್ಯಾಧುನಿಕ ರೈಫಲ್ ಗಳು ಸೇರಿದಂತೆ ಮಿಲಿಟರಿ ಸಾಧನ ಸಲಕರಣಿಗಳನ್ನು ಖರೀದಿಸಿ ಭಾರತದ ಶಸ್ತ್ರಾಸ್ತ್ರ ಪಡೆಗಳನ್ನು ಮತ್ತಷ್ಟು ಬಲವರ್ಧನೆಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ರಕ್ಷಣಾ ಇಲಾಖೆಯ ಉನ್ನತಾಕಾರಿಯೊಬ್ಬರು ತಿಳಿಸಿದ್ದಾರೆ.
ಸಿಗ್ ಸೂಯರ್ ಅಸಾಲ್ಟ್ ರೈಫಲ್ಗಳ ಖರೀದಿಗಾಗಿ 780 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
ಅದೇ ರೀತಿ ಸ್ಮಾರ್ಟ್ ಆಯಂಟಿ ಏರ್ಫೀಲ್ಡ್ ವೆಪನ್(ಎಸ್ ಡಬ್ಲ್ಯೂ) ಹೊಂದಲು 970 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.
ಇವುಗಳೂ ಸೇರಿದಂತೆ ಸೇನಾ ಉಪಕರಣಗಳ ಖರೀದಿಗೆ 2290 ಕೋಟಿ ರೂ.2017ರ ಅಕ್ಟೋಬರ್ನಿಂದ ದೇಶದ ಶಸ್ತ್ರಾಸ್ತ್ರ ಪಡೆಗಳಾದ ಆರ್ಮಿ, ಏರ್ ಫೋರ್ಸ್ ಮತ್ತು ನೇವಿಗಳಿಗಾಗಿ ಅತ್ಯಾಧುನಿಕ ಯುದ್ದಾಸ್ತ್ರಗಳನ್ನು ಖರೀದಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
PublicNext
29/09/2020 12:36 pm