ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಕೊರೊನಾ ವೇಳೆ ಜನರ ಸಂಕಷ್ಟ ಕಂಡು ವಿದೇಶಾಂಗ ಇಲಾಖೆ ಆಯ್ಕೆ ಮಾಡಿಕೊಂಡೆ; ರಾಜ್ಯಕ್ಕೆ ಟಾಪರ್ ಬಂದ ಅವಿನಾಶ್ ಮನದಾಳದ ಮಾತು

ಕೊರೊನಾ‌ ಸಂಕಷ್ಟದ ವೇಳೆಯಲ್ಲಿ ಜನರು ಅನುಭವಿಸಿದ ನೋವು ನನ್ನಲ್ಲಿ ಏನನ್ನಾದರೂ ಮಾಡಬೇಕೆಂಬ ಛಲ ಹುಟ್ಟಿತು. ವಿದೇಶಗಳಿಂದ 15 ಲಕ್ಷ ಜನರನ್ನು ಭಾರತಕ್ಕೆ ಕರೆತರಲಾಯಿತು‌. ಉಕ್ರೇನ್-ರಷ್ಯಾ ನಡುವಿನ ಯುದ್ಧದ ವೇಳೆಯೂ ಭಾರತೀಯರನ್ನು ಮರಳಿ ಬರುವಂತೆ ಮಾಡಲಾಯಿತು‌. ಇದರಲ್ಲಿ ವಿದೇಶದಲ್ಲಿರುವ ಭಾರತೀಯ ರಾಯಭಾರಿಗಳ ಪಾತ್ರ ಹೆಚ್ಚು. ನಾನು ಸಹ ವಿದೇಶಾಂಗ ಇಲಾಖೆಯಲ್ಲಿ ಸೇರಿ ಸೇವೆ ಮಾಡಬೇಕೆಂಬ ಆಸೆಯಿಂದ ಆಯ್ಕೆ ಮಾಡಿಕೊಂಡಿದ್ದೇನೆ. ದಿನಕ್ಕೆ ಕೇವಲ ಆರು ಗಂಟೆಯಾದರೂ ಓದಬೇಕು. ಬೇರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿ ದೆಸೆಯಿಂದಲೇ ಓದುವ ಹವ್ಯಾಸ ಬೆಳೆಸಿಕೊಂಡಿದ್ದರೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ''.

ಇದು ಯುಪಿಎಸ್ ಸಿ ಪರೀಕ್ಷೆಯಲ್ಲಿ 31ನೇ ರ್ಯಾಂಕ್ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅವಿನಾಶ್ ಹೇಳಿದ ಮಾತು. ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೋಷಕರ ಒತ್ತಡಕ್ಕೆ ಮಣಿದು ಯಾರೂ ಯುಪಿಎಸ್‌ಸಿ ಬರೆಯಬಾರದು. ಅವರೇ ಸ್ವ ಇಚ್ಛೆಯಿಂದ ಓದಬೇಕು‌. ನಮಗೆ ಆಸಕ್ತಿ ಇರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯುಪಿಎಸ್‌ಸಿ ಪರೀಕ್ಷೆಯನ್ನು ಲಕ್ಷಾಂತರ ಮಂದಿ ಬರೆಯುತ್ತಾರೆ. ಇದರಲ್ಲಿ ಉತ್ತೀರ್ಣರಾಗೋದು ಕಡಿಮೆ. ರಾಜ್ಯದಲ್ಲಿ ನೂರು ರ‍್ಯಾಂಕ್‌ ಒಳಗೆ ಇಬ್ಬರು ಮಾತ್ರ ಬಂದಿದ್ದಾರೆ. ಇದು ಬೇಸರದ ಸಂಗತಿ‌. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇದೆ. ಇಲ್ಲಿನವರು ಹೆಚ್ಚಾಗಿ ಪರೀಕ್ಷೆ ಬರೆಯುವಂತಾಗಬೇಕು ಎಂದು ಹೇಳಿದರು.

Edited By :
PublicNext

PublicNext

02/06/2022 01:34 pm

Cinque Terre

53.94 K

Cinque Terre

2