ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಿದ್ಯಾರ್ಥಿನಿಯರ ನಡುವೆ ಹೊಟೇಲ್ ನಲ್ಲಿ ಮಾರಾಮಾರಿ, ವೀಡಿಯೋ ವೈರಲ್

ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ ನಡುವೆ ಹೊಟೇಲೊಂದರಲ್ಲಿ ನಡೆದಿರುವ ಮಾರಾಮಾರಿ ವೀಡಿಯೋವೊಂದು ವೈರಲ್ ಆಗಿದೆ.

ಇಲ್ಲಿನ ಬಾವುಟಗುಡ್ಡೆಯಲ್ಲಿರುವ ಎನ್ ಕೆಫೆ ಹೊಟೇಲ್ ನಲ್ಲಿ ಈ ಮಾರಾಮಾರಿ ನಡೆದಿದೆ. ಕಾಲೇಜು ವಿದ್ಯಾರ್ಥಿನಿಯರ ನಡುವೆ ನಡೆದಿರುವ ಸ್ಟ್ರೀಟ್ ಫೈಟ್ ವೀಡಿಯೋ ವನ್ನು ಅಲ್ಲಿಯೇ ಇದ್ದ ಯಾರೋ ವೀಡಿಯೋ ಮಾಡಿದ್ದಾರೆ.

ಸ್ಥಳೀಯ ಖಾಸಗಿ ಕಾಲೇಜು ಪದವಿ ವಿದ್ಯಾರ್ಥಿನಿಯರು ನಿನ್ನೆ ಸಂಜೆ ಹೊಟೇಲ್ ಮುಂಭಾಗ ಈ ಮಾರಾಮಾರಿ ನಡೆಸಿದ್ದಾರೆ ಎನ್ನಲಾಗಿದೆ. ಯುವಕರೊಂದಿಗೆ ಹೊಟೇಲ್ ನಲ್ಲಿ ಕುಳಿತಿದ್ದ ಪದವಿ ಕಾಲೇಜಿನ ವಿದ್ಯಾರ್ಥಿನಿಗೆ ಸ್ಥಳಕ್ಕೆ ಬಂದ ಮತ್ತೊಬ್ಬ ವಿದ್ಯಾರ್ಥಿನಿ ಹಲ್ಲೆ ಮಾಡಿದ್ದಾಳೆ.‌ ಆಗ ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಯಾವ‌ ಕಾರಣಕ್ಕೆ ಈ ವಿದ್ಯಾರ್ಥಿನಿಯರ ನಡುವೆ ಜಗಳ ಉಂಟಾಗಿದೆ ಎಂದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿಲ್ಲ ಎಂದು ಪೊಲೀಸರೇ ಸ್ಪಷ್ಟ ಪಡಿಸಿದ್ದಾರೆ.

Edited By :
PublicNext

PublicNext

05/04/2022 05:13 pm

Cinque Terre

70.37 K

Cinque Terre

10