ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಮುಂಜಿಗೆ ಅಂಜಿ ಹಿಂದೂ ಧರ್ಮಕ್ಕೆ ಬಂದ ಅರ್ಚಕರು!

ಅವರು ಅನೇಕ ವರ್ಷಗಳಿಂದ ಪೂಜೆ ಪುನಸ್ಕಾರ ಮಾಡಿಕೊಂಡಿದ್ದ ದೇವಾಲಯದ ಅರ್ಚಕ.. ಆದರೇ ಇದ್ದಕ್ಕಿದ್ದಂತೆ ಅವರಿಗೇನಾಯಿತೋ ಹಿಂದೂ ಧರ್ಮ ತೊರೆದು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.. ಬಳಿಕ ಮುಂಜಿಗೆ ಅಂಜಿದ ಅವರು ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾರೆ..ಅಷ್ಟಕ್ಕೂ ಈ ವಿಲಕ್ಷಣ ಘಟನೆ ನಡೆದಿರೋದು ಎಲ್ಲಿ ಅಂತೀರಾ..ಈ ಸ್ಟೋರಿ ನೋಡಿ..

ಹೀಗೆ ಕೈಯಲ್ಲಿ ಮಂಗಳಾರತಿ ತಟ್ಟೆ, ಬಾಯಲ್ಲಿ ಮಂತ್ರಘೋಷ, ಹೆಗಲ ಮೇಲೆ ಕೆಂಪು ವಸ್ತ್ರ ಇವರನ್ನ ನೋಡಿದ್ರೇ ಯಾವುದೋ ದೇವಾಲಯದ ಅರ್ಚಕರು ಅಂತಾ ಎಂಥವರಿಗೂ ಅನಿಸುತ್ತೆ.. ಹೀಗೆ ಪೂಜೆ ಮಾಡಿಕೊಂಡಿರೋ ಅರ್ಚಕರು ಒಂದು ದಿನದ ಹಿಂದೆ ಹೀಗೆ ಅರ್ಚಕರಾಗಿ ಇರಲಿಲ್ಲಾ. ಬದಲಾಗಿ ಹಿಂದೂ ಧರ್ಮವನ್ನೇ ತ್ಯಜಿಸಿ ಮುಸ್ಲಿಂ ಸಮುದಾಯಕ್ಕೆ ಸೇರಿಕೊಂಡಿದ್ದರು. ಚಂದ್ರಶೇಖರ್ ಆಗಿದ್ದ ಇವರು ಮುಬಾರಕ್ ಪಾಷ ಆಗಿದ್ದರು..

ತುಮಕೂರು ತಾಲ್ಲೂಕಿನ ಹಿರೇಹಳ್ಳಿಯ ಎಚ್ ಆರ್.ಚಂದ್ರಶೇಖರ್ ಅನ್ನೋ ವ್ಯಕ್ತಿ 25 ವರ್ಷಗಳಿಂದ ಹಿರೇಹಳ್ಳಿಯ ಓಂಕಾರೇಶ್ವರ ದೇವಾಲಯದ ಅರ್ಚಕರಾಗಿ ಕೆಲಸ ಮಾಡಿಕೊಂಡಿದ್ದರು. ಬಡತನದ ನಡುವೆಯೇ ಹೆಣ್ಣು ಮಕ್ಕಳ ಮದುವೆ ಮಾಡಿಮುಗಿಸಿದ್ದರು. ಮದುವೆ ಕಾರ್ಯಕ್ಕೆ ಸಾಕಷ್ಟು ಕಡೆ ಸಾಲ ಸಹ ಮಾಡಿಕೊಂಡಿದ್ದರು. ಜೊತೆಗೆ ಅಣ್ಣ ತಮ್ಮಂದಿರ ನಡುವೆ ಇದ್ದ ಆಸ್ತಿ ವಿವಾದ ಸಹ ಇವರಿಗೆ ತಲೆನೋವಾಗಿ ಪರಿಣಮಿಸಿತ್ತು..

ಈ ಎಲ್ಲಾ ಕಷ್ಟಗಳಿಂದ ಬೇಸತ್ತಿದ್ದ ಚಂದ್ರಶೇಖರ್ ಮನಸ್ಥಿತಿ ಕುಗ್ಗಿ ಹೋಗಿಬಿಟ್ಟಿದ್ದರಂತೆ.. ಹೇಳಿ ಕೇಳಿ ಚಂದ್ರಶೇಖರ್ ವಾಸವಿದ್ದ ಏರಿಯಾ ಮುಸ್ಲಿಂಮರದ್ದು, ಮುಸ್ಲಿಂ ಧರ್ಮದಲ್ಲಿ ಸತ್ತ ಬಳಿಕ ನಡೆಯೋ ಆಚಾರಗಳಿಗೆ ಚಂದ್ರಶೇಖರ್ ಆಕರ್ಷಿತರಾಗಿದ್ದರಂತೆ, ನಾನು ಸಹ ಮುಸ್ಲಿಂ ಧರ್ಮಕ್ಕೆ ಸೇರಿ ಕೊಂಡರೇ ನನ್ನ ಸಾವಿನ ಬಳಿಕ ಎಲ್ಲಾ ಆಚಾರಗಳು ಧರ್ಮ ಬದ್ದವಾಗಿ ನಡೆಯುತ್ತೆ ಅನ್ನೋ ನಂಬಿಕೆ ಯಿಂದ ಅವರು ತನ್ವಿರ್ ಅನ್ನೋ ಸ್ಥಳೀಯ ಜೆಡಿಎಸ್ ಮುಖಂಡರ ಸಹಾಯದೊಂದಿಗೆ ಮಸೀದಿಗೆ ಹೋಗಿ ಮತಾಂತರ ಪ್ರಕ್ರಿಯೆ ಮುಗಿಸಿದ್ದರು. ಅಲ್ದೆ ಮುಬಾರಕ್ ಪಾಷ ಅನ್ನೋ ಹೆಸರಿಟ್ಟು ಕೊಂಡು ಪತ್ರಿಕೆಗಳಲ್ಲಿ ಜಾಹಿರಾತು ಸಹ ನೀಡಿದ್ದರು.

ಚಂದ್ರಶೇಖರ್ ಅವರ ಈ ನಿರ್ಧಾರಕ್ಕೆ ಕುಟುಂಬಸ್ಥರ ವಿರೋಧ ಸಹ ಇತ್ತು. ಕಾನೂನು ರೀತಿ ಎಲ್ಲಾ ಪ್ರಕ್ರಿಯೆ ಮುಗಿಸಿದ್ದ ಚಂದ್ರಶೇಖರ್ ಅವರಿಗೆ ಮುಸ್ಲಿಂ ಧರ್ಮದ ಮುಂಜಿ ಮಾಡೋ ಪ್ರಕ್ರಿಯೆ ಎದುರಾಗಿತ್ತು ಆದರೆ ಸಕ್ಕರೆ ಖಾಯಿಲೆ ಇದ್ದ ಕಾರಣ ಚಂದ್ರಶೇಖರ್ ಅವರಿಗೆ ಮುಂಜಿ ಮಾಡಲು ಆಗಿರಲಿಲ್ಲಾ ಮುಂಜಿ ಆದರೇ ಮಾತ್ರ ಮುಸ್ಲಿಂ ಧರ್ಮಕ್ಕೆ ಸೇರಿದಂತಾಗುವುದು ಅನ್ನೋ ಕಾರಣಕ್ಕೆ ಮತಾಂತರ ಪ್ರಕ್ರಿಯೆ ಅಲ್ಲಿಗೆ ನಿಂತಿದೆ. ಈ ವಿಚಾರ ತಿಳಿದ ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಅನೇಕ ಮುಖಂಡರು ಚಂದ್ರಶೇಖರ್ ಮನೆಗೆ ತೆರಳಿ ಮತಾಂತರ ವಾಗದಂತೆ ತಿಳಿಹೇಳಿದ್ದಾರೆ. ಬಳಿಕ ತಮ್ಮ ನಿರ್ಧಾರವನ್ನ ಕೈಬಿಟ್ಟ ಚಂದ್ರಶೇಖರ್ 24 ಗಂಟೆಗಳಲ್ಲೇ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾರೆ..

ಒಟ್ಟಾರೆ ಮನೆಯ ಸಮಸ್ಯೆಗಳಿಂದ ಮನನೊಂದಿದ್ದ ಅವರು ಈ ರೀತಿಯ ಮತಾಂತರಕ್ಕೆ ಮುಂದಾಗಿರೋದು ಎಷ್ಟು ಸರಿ ಎಮಬ ಜನರಲ್ಲಿ ಕಾಡಿದೆ. ಸದ್ಯ ಎಂದಿನ ಕಾಯಕದಂತೆ ಪೂಜೆ ಪುನಸ್ಕಾರದಲ್ಲಿ ತೊಡಗಿ ಮತಾಂತರ ಪ್ರಕರಣಕ್ಕೆ ಇತಿಃಶ್ರೀ ಹಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಟ್ರೆಂಡ್ ಆಗಿದೆ.

ವರದಿ: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್

Edited By :
PublicNext

PublicNext

22/08/2022 02:56 pm

Cinque Terre

42.81 K

Cinque Terre

5