ಲಡಾಖ್ : ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಯುವುದಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು, ಇದಕ್ಕೂ ಮುನ್ನ ಲಡಾಖ್ ನ ಎಲ್ಎಸಿಯಾದ್ಯಂತ ಇರುವ ಪ್ರಮುಖ, ಆಯಕಟ್ಟಿನ ದೃಷ್ಟಿಯಿಂದ ಬಹುಮುಖ್ಯವೂ ಆಗಿರುವ 6 ಗುಡ್ಡಗಳನ್ನು ವಶಕ್ಕೆ ಪಡೆದಿರುವ ವರದಿಗಳು ಬಂದಿದೆ.
ಚೀನಾ ಗಡಿಯಲ್ಲಿ ತೆಗೆದಿರುವ ತಗಾದೆಗೆ ಒಂದರ ಮೇಲೆ ಒಂದರಂತೆ ಭಾರತ ಪೆಟ್ಟು ನೀಡುತ್ತಿದೆ.
ಈಶಾನ್ಯ ಲಡಾಖ್ ನಲ್ಲಿ ಈ 6 ಗುಡ್ಡಗಳನ್ನು ಭಾರತ ವಶಕ್ಕೆ ಪಡೆದಿರುವುದರಿಂದ ಈಗ ಗಡಿಯಲ್ಲಿ ಚೀನಾದ ಪ್ರತಿಯೊಂದು ನಡೆಯ ಮೇಲೂ ಹದ್ದಿನ ಕಣ್ಣಿಡುವುದಕ್ಕೆ ಸಾಧ್ಯವಾಗಲಿದೆ.
ಇನ್ನು ಚೀನಾದ ಆಕ್ರಮಣಕಾರಿ ಸ್ವಭಾವವನ್ನು ಅರಿತಿರುವ ಭಾರತ ಗಡಿಯಲ್ಲಿ ರಾಫೆಲ್ ಹಾರಾಟ ಮುಂದುವರೆಸಿದೆ.
ಈ ಬಾರಿಯ ಕಾರ್ಪ್ಸ್ ಕಮಾಂಡರ್ ಸಭೆಯಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಯೊಬ್ಬರು ಭಾಗಿಯಾಗುವ ನಿರೀಕ್ಷೆ ಇದೆ.
PublicNext
21/09/2020 12:40 pm