ಇತ್ತೀಚೆಗೆ ಫೋಟೋಶೂಟಿಂಗ್, ಸೆಲ್ಫಿ ಗೀಳು ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಅನೇಕರು ಪ್ರಾಣ ತೆತ್ತ ಸುದ್ದಿಗಳನ್ನ ನೋಡಿದ್ದೇವೆ, ಕೇಳಿದ್ದೇವೆ. ಹಾಗೆ ಮಹಿಳೆಯೊಬ್ಬಳು ವಾಹನ ಸಂಚಾರ ಹೆಚ್ಚಾಗಿರುವ ಸೇತುವೆ ಮೇಲೆ ಮಕ್ಕಳ ಫೋಟೋ ಕ್ಲಿಕ್ಕಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಕ್ಕಳೊಂದಿಗೆ ಬಂದ ದಂಪತಿ ಸೇತುವೆಯ ಒಂದು ಬದಿಯಲ್ಲಿ ಬೈಕ್ ನಿಲ್ಲಿಸಿದರು. ಬಳಿಕ ಮಹಿಳೆ ತನ್ನ ವೇಲ್ ಅನ್ನು ಪತಿಗೆ ನೀಡಿ ಬೈಕ್ ನಂಬರ್ ಪ್ಲೇಟ್ ಮರೆ ಮಾಡುವಂತೆ ಹೇಳಿದಳು. ಆಗ ಪತಿ ನಂಬರ್ ಪ್ಲೇಟ್ ಮೇಲೆ ವೇಲ್ ಹಾಕುತ್ತಾನೆ. ಇತ್ತ ಮಹಿಳೆ ಇಬ್ಬರು ಮಕ್ಕಳನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸಲು ಮುಂದಾಗುತ್ತಾರೆ. ಈ ವೇಳೆ ಸಿಸಿಟಿವಿ ಕ್ಯಾಮೆರಾ ನೋಡುತ್ತಿದ್ದಂತೆಯೇ ಅಲ್ಲಿಂದ ಎಸ್ಕೇಪ್ ಆಗುತ್ತಾರೆ. ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ವಿಡಿಯೋ ನೋಡಿದ ನೆಟ್ಟಿಗರು, 'ಪೋಷಕರೆ ಹೀಗೆ ಮಾಡಿದರೆ ಹೇಗೆ. ಇವತ್ತು ಅವ್ರು ಮಾಡಿದಂತೆ ನಾಳೆ ಮಕ್ಕಳು ಇಂತಹ ಕೆಲಸ ಮಾಡುತ್ತಾರೆ. ಅವರಿಗೆ ತಕ್ಕ ಶಿಕ್ಷೆ ವಿಧಿಸಬೇಕು' ಎಂದು ಆಗ್ರಹಿಸಿದ್ದಾರೆ. ಇನ್ನು ಕೆಲವರು 'ಬೇಜವಾಬ್ದಾರಿ ಪೋಷಕರು. ಫೋಟೋ ಕ್ಲಿಕ್ಕಿಸಿಕೊಳ್ಳುವುದು ತಪ್ಪ. ಆದ್ರೆ ವಾಹನ ಸಂಚಾರ ದಟ್ಟನೆಯ ಸೇತುವೆ ಮೇಲೆ ಫೋಟೋ ಕ್ಲಿಕ್ಕಿಸಿಕೊಳ್ಳುವುದು ತಪ್ಪು. ಪ್ರಾಣಕ್ಕಿಂತ ಸೆಲ್ಫಿ ಮುಖ್ಯವೇ' ಎಂದು ಪ್ರಶ್ನಿಸಿದ್ದಾರೆ.
PublicNext
16/11/2020 04:51 pm