ಬೆಂಗಳೂರು: ರಾಜ್ಯ ಸರ್ಕಾರವು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿಯನ್ನು ನಿಷೇಧಿಸಿದೆ. ಹೀಗಿದ್ದರೂ ಪಟಾಕಿ ಹಚ್ಚಲು ಹೋಗಿ ಬೆಂಗಳೂರಿನಲ್ಲಿ 7 ಮಕ್ಕಳ ಕಣ್ಣಿಗೆ ಹಾನಿಯಾಗಿದೆ.
ಬೆಂಗಳೂರಿನ ಬೇರೆ ಬೇರೆ ನಿವಾಸಿಗಳಾದ ಮೂವರು ಮಕ್ಕಳು ಪಟಾಕಿ ಹಚ್ಚಲು ಹೋಗಿ ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ. ಪೋಷಕರು ರಾತ್ರೋ ರಾತ್ರಿ ಅವರನ್ನು ಮಿಂಟೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಮೂರು ಜನರು ಕೂಡ 10 ರಿಂದ 11 ವರ್ಷದ ಒಳಗಿನವರಾಗಿದ್ದಾರೆ. ಇದುವರೆಗೂ ಮಿಂಟೋ ಆಸ್ಪತ್ರೆಗೆ ಒಟ್ಟು 7 ಮಂದಿ ಮಕ್ಕಳು ಪಟಾಕಿ ಹಾನಿಯಿಂದ ದಾಖಲಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
PublicNext
16/11/2020 08:57 am