ಶ್ರೀನಗರ: ಎಷ್ಟೇ ಬುದ್ಧಿ ಕಲಿಸಿದರೂ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸುತ್ತಿದೆ. ಪಾಕ್ ಸೈನ್ಯವು ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ನಡೆಸಿದ ಭಾರೀ ಗಾತ್ರದ ತೋಪುಗಳಿಂದ ದಾಳಿಯಲ್ಲಿ ಅಪಾರ ಪ್ರಮಾಣದ ಆಸ್ತಿ ಹಾಗೂ ಜೀವ ಹಾನಿ ಸಂಭವಿಸಿದೆ ಎಂದು ಗಡಿ ಭದ್ರತಾ ಪಡೆ ಐಜಿ ರಾಜೇಶ್ ಮಿಶ್ರಾ ಹೇಳಿದ್ದಾರೆ.
ರಾಜೇಶ್ ಮಿಶ್ರಾ ಅವರು ದಾಳಿಯಲ್ಲಿ ಹುತಾತ್ಮರಾದ ಬಿಎಸ್‌ಎಫ್ ಸಬ್-ಇನ್ಸ್‌ಪೆಕ್ಟರ್ ರಾಕೇಶ್ ದೋವಲ್ ಅವರಿಗೆ ಭಾನುವಾರ ಸೇನಾ ಗೌರವ ಅರ್ಪಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಮ್ಮ ಕಡೆಯಿಂದ ಯಾವುದೇ ರೀತಿಯ ಪ್ರಚೋದನೆ ಇರಲಿಲ್ಲ. ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಏಕಾಏಕಿ ಭಾರೀ ದಾಳಿ ನಡೆಸಿತು. ಕೂಡಲೇ ಪಾಕಿಸ್ತಾನಕ್ಕೆ ಪ್ರತಿ ದಾಳಿಯಲ್ಲಿ ತಕ್ಕ ಉತ್ತರ ನೀಡಿದ್ದೇವೆ. ಆದರೆ ಕಾರ್ಯಾಚರಣೆ ವೇಳೆ ಐವರು ಯೋಧರು ಹುತಾತ್ಮರಾದರು. ಅವರಿಗೆ ನಮ್ಮಿಂದ ಅತ್ಯುನ್ನತ ಗೌರವ ಅರ್ಪಿಸಿದ್ದೇವೆ. ಪಾಕ್ ದಾಳಿಯಲ್ಲಿ 6 ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ' ಎಂದು ಹೇಳಿದರು.
PublicNext
16/11/2020 08:43 am