ನವದೆಹಲಿ : ಭಾರತೀಯ ಸೇನೆ ಪಶುವೈದ್ಯಕೀಯ ಮತ್ತು ರಿಮೌಂಟ್ ದಳ ನೆಲಬಾಂಬ್ ಗಳನ್ನು ಪತ್ತೆ ಹಚ್ಚುವ ತರಬೇತಿ ಪಡೆದಿರುವ 20 ಮಿಲಿಟರಿ ಕುದುರೆ ಮತ್ತು 10 ಶ್ವಾನಗಳನ್ನು ಬಾಂಗ್ಲಾದೇಶ ಸೈನ್ಯಕ್ಕೆ ಭಾರತೀಯ ಸೇನೆ ಉಡುಗೊರೆಯಾಗಿ ನೀಡಿದೆ.
ಕಳೆದ ವರ್ಷ ಭಾರತ 10 ಶ್ವಾನಗಳನ್ನು ಬಾಂಗ್ಲಾದೇಶಕ್ಕೆ ಉಡುಗೊರೆಯಾಗಿ ನೀಡಿತ್ತು.
ಪೆಟ್ರಾಫೋಲ್ ಬೆನಾಪೋಲ್ ಇಂಟಿಗ್ರೇಟೆಡ್ ಪೋಸ್ಟ್ ಬಳಿ ಬಾಂಗ್ಲಾದೇಶ ಸೇನೆಯ ನಿಯೋಗ ಭಾರತೀಯ ಸೇನೆಯಿಂದ ಈ ಉಡುಗೊರೆಯನ್ನು ಸ್ವೀಕರಿಸಿದೆ.
ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸ್ನೇಹ ಸೌಹಾರ್ದವೃದ್ಧಿಗೆ ಈ ಉಡುಗೊರೆ ಸಹಾಯಕಾರಿಯಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ.
ಭಾರತೀಯ ಸೇನಾ ನಿಯೋಗವನ್ನು ಬ್ರಹ್ಮಾಸ್ತ್ರ ಕಾಪ್ಸ್ ಮುಖ್ಯಸ್ಥ ಮೇಜರ್ ಜನರಲ್ ನರಿಂದರ್ ಸಿಂಗ್ ಕ್ರೌಡ್ ನೇತೃತ್ವದಲ್ಲಿ ಕುದುರೆ ಮತ್ತು ಶ್ವಾನಗಳನ್ನು ಬಾಂಗ್ಲಾದೇಶ ಸೇನೆಗೆ ನೀಡಲಾಯಿತು.
PublicNext
10/11/2020 07:16 pm