ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿ ಬಹುದೊಡ್ಡ ಬೆಂಕಿ ಅನಾಹುತ

ಬೆಂಗಳೂರು- ಸಿಲಿಕಾನ್ ಸಿಟಿಯಲ್ಲಿ ಬಹುದೊಡ್ಡ ಅಗ್ನಿ ಅನಾಹುತ ಸಂಭವಿಸಿದೆ. ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೃಹತ್ ಪ್ರಮಾಣದ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಸುತ್ತಲೂ ದಟ್ಟ ಹೊಗೆ ಆವರಿಸಿದೆ.

ನಗರದ ಹೊಸ ಗುಡ್ಡದಹಳ್ಳಿಯಲ್ಲಿ ಘಟನೆ ನಡೆದಿದೆ‌. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಅಕ್ಕಪಕ್ಕದ ಮನೆಗಳ‌ಲ್ಲಿ ಇರುವವರನ್ನು ಪೊಲೀಸರು ಸ್ಥಳಾಂತರಿಸುತ್ತಿದ್ದಾರೆ. ಸುತ್ತಲಿನ ಮನೆಗಳಿಗೂ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇದೆ‌. ಸುತ್ತಲೂ ಹೊಗೆ ಆವರಿಸಿದ್ದು ಸಂಚಾರಕ್ಕೂ ಅಡಚಣೆ ಉಂಟಾಗಿದೆ.‌

ಕಾರ್ಖಾನೆಯ ಸುತ್ತ ನಿಲ್ಲಿಸಿದ್ದ ವಾಹನಗಳಿಗೂ ಹಾನಿಯುಂಟಾಗಿದೆ.

Edited By : Nagaraj Tulugeri
PublicNext

PublicNext

10/11/2020 12:28 pm

Cinque Terre

58.37 K

Cinque Terre

0

ಸಂಬಂಧಿತ ಸುದ್ದಿ