ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಲಿಂಗಾಯತರ ವೋಟು ಬೇಕು, ಬೇಡಿಕೆ ಈಡೇರಿಸಿ ಅಂದ್ರೆ ಲಾಠಿ ಏಟು – ಆರ್.ಅಶೋಕ್ ಗರಂ

ಬೆಳಗಾವಿ: ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿಚಾರ್ಜ್ ಪ್ರಕರಣದಲ್ಲಿ ಗೃಹ ಸಚಿವರ ಹೇಳಿಕೆ ಅತ್ಯಂತ ಖಂಡನೀಯ, ಅವರ ಹೇಳಿಕೆಯೇ ಆ ಸಮಾಜಕ್ಕೆ ಮಾಡಿರುವ ಅನ್ಯಾಯ. ಲಿಂಗಾಯತ ಸಮುದಾಯದ ವೋಟು ಬೇಕು ಬೇಡಿಕೆ ಈಡೇರಿಸಿ ಅಂದ್ರೆ ಲಾಠಿ ಏಟು. ಕಾಂಗ್ರೆಸ್‌ ಗೆ ಬುದ್ಧಿ ಕಲಿಸಲು ಆ ಸಮಾಜ ತೀರ್ಮಾನ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವತ್ತು ವಕ್ಫ್‌ ಬೋರ್ಡ್ ಅವಾಂತರದ ಮೇಲೆ ಚರ್ಚೆಗೆ ನಿಲುವಳಿ ಕೊಟ್ಟಿದ್ದೇನೆ. ವಕ್ಫ್‌ ಬೋರ್ಡ್‌ ನ ಅವಾಂತರ, ಅನ್ಯಾಯದ ಬಗ್ಗೆ ಚರ್ಚೆ ಮಾಡ್ತೀವಿ. ಮಠ ಮಾನ್ಯಗಳು, ಶಾಲಾ ಕಾಲೇಜುಗಳ ಆಸ್ತಿ ಕಬಳಿಕೆ ಆಗಿದೆ. ವಕ್ಫ್ ಬೋರ್ಡ್ ದೆವ್ವದ ರೀತಿ ರಾಜ್ಯವನ್ನ ವ್ಯಾಪಿಸುತ್ತಿದೆ ಎಂದರು.

ಒಂದು ರಾಷ್ಟ್ರ ಒಂದು ಚುನಾವಣೆ ಒಳ್ಳೆಯ ತೀರ್ಮಾನ. ನಾನು ಕೇಂದ್ರದ ತೀರ್ಮಾನವನ್ನ ಸ್ವಾಗತ ಮಾಡ್ತೀನಿ. ಪ್ರತಿ ಚುನಾವಣೆಗಳಲ್ಲಿ ನೀತಿ ಸಂಹಿತೆ ಬಂದಾಗ ಯಾವ ಅಭಿವೃದ್ಧಿ ಕೆಲಸ ಆಗಲ್ಲ. ಪದೇ ಪದೇ ಚುನಾವಣೆಗಳು ನಡೆದರೆ ಸಾರ್ವಜನಿಕ ಹಣ ದುಂದುವೆಚ್ಚ ಆಗುತ್ತೆ. ಇದಕ್ಕೆ ಕಡಿವಾಣ ಹಾಕಲು ಕೈಗೊಂಡ‌ ಮೋದಿ ಅವರ ನಿರ್ಧಾರ ಸ್ವಾಗತ ಎಂದು ಹೇಳಿದರು.

Edited By : Suman K
PublicNext

PublicNext

13/12/2024 11:48 am

Cinque Terre

30.56 K

Cinque Terre

6

ಸಂಬಂಧಿತ ಸುದ್ದಿ