ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋಂಕಿತ ಶವಗಳಿಗೆ ಅಂತ್ಯ ಸಂಸ್ಕಾರ ಮಾಡಿದ ಪುಣ್ಯವಂತರು

ಬೆಂಗಳೂರು: ಕೊರೊನಾ ವೈರಸ್ಸಿನ ಆರ್ಭಟಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದ ಸಿಲಿಕಾನ್ ಸಿಟಿ ಬೆಂಗಳೂರು ನಗರ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ. ಈ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ವೀರರನ್ನು ನೆನಪು ಮಾಡಿಕೊಳ್ಳದೆ ಇದ್ದರೆ ಹೇಗೆ..? ವೈದ್ಯರು, ನರ್ಸ್‌ಗಳು, ಸಹಾಯಕ ಸಿಬ್ಬಂದಿ, ಆಂಬುಲೆನ್ಸ್‌ ಚಾಲಕರು, ಪೊಲೀಸರು ಇವರಷ್ಟೇ ಕೊರೊನಾ ವಾರಿಯರ್ಸ್‌ಗಳಲ್ಲ.. ಇವರೆಲ್ಲರಷ್ಟೇ ಮುಖ್ಯವಾದ ಮತ್ತೊಂದು ವರ್ಗವಿದೆ. ಇವರು ಕೊರೊನಾ ಸೋಂಕಿನಿಂದ ಮೃತಪಟ್ಟವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನೆರವೇರಿಸುವ ಸ್ವಯಂ ಸೇವಕರು..

ಹೌದು. ತಮ್ಮ ಮನೆಯವರು, ತೀರಾ ಬೇಕಾದವರು, ತಮ್ಮ ಕರುಳಕುಡಿ ಸತ್ತು ಬಿದ್ದಿದ್ದರೂ ಕೂಡಾ ಸಮೀಪಕ್ಕೆ ಸುಳಿಯಲಾಗದ ಸ್ಥಿತಿ. ಕೊನೆಯ ಬಾರಿ ಮುಖ ದರ್ಶನ ಮಾಡಲಾಗದಂಥಾ ಸನ್ನಿವೇಶ. ಎಷ್ಟೇ ಹಣ ಇದ್ದರೂ ಹೆಣಕ್ಕೊಂದು ಗೌರವಯುತ ವಿದಾಯ ಹೇಳಲು ಸಾಧ್ಯವಾಗದ ವಿಚಿತ್ರ ಪರಿಸ್ಥಿತಿ ಅದು. ಆ ಸಂದರ್ಭದಲ್ಲಿ ಶವ ಸಂಸ್ಕಾರಕ್ಕೆ ಹೆಗಲಾದ ಕೊರೊನಾ ವಾರಿಯರ್ಸ್‌ಗಳು ಇವರು..!

ಮರ್ಸಿ ಏಂಜಲ್ಸ್, ಪ್ರಾಜೆಕ್ಟ್‌ ಸ್ಮೈಲ್, ಸಿಖ್ ಸಮುದಾಯ, ಕ್ರೈಸ್ತ ಸಮುದಾಯ, ಕೇರಳ ಮಲೆಯಾಳಿ ಸಂಘ.. ಹೀಗೆ ಹಲವು ಸಮುದಾಯಗಳು ಕೊರೊನಾ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಮುಂದೆ ಬಂದವು.. ಬೆಂಗಳೂರಿನಲ್ಲಿ ಈವರೆಗೂ 750ಕ್ಕೂ ಹೆಚ್ಚು ಅಂತ್ಯಸಂಸ್ಕಾರಗಳನ್ನು ಈ ಸಂಘಟನೆಗಳು ಮಾಡಿವೆ. ತಮ್ಮವರನ್ನು ಕಳೆದುಕೊಂಡ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳುವ ಜೊತೆಯಲ್ಲೇ, ಅವರವರ ಧರ್ಮಕ್ಕೆ ಅನುಗುಣವಾಗಿ ಪಾರ್ಥಿವ ಶರೀರಕ್ಕೆ ಶಾಸ್ತ್ರೋಕ್ತವಾಗಿ ಗೌರವಯುತ ವಿದಾಯ ನೀಡಿದ ಈ ಸಂಘಟನೆಗಳು, ಕೋವಿಡ್ ಕಾಲದಲ್ಲಿಅಪಾರ ಪುಣ್ಯದ ಕೆಲಸ ಮಾಡಿವೆ. ತಮ್ಮ ಜೇಬಿನ ಹಣವನ್ನೇ ಖರ್ಚು ಮಾಡಿದ್ದರೂ ಕೂಡಾ ಈ ಸಂಘಟನೆಗಳ ಸದಸ್ಯರ ಮೊಗದಲ್ಲಿ ಸಾರ್ಥಕತೆ ತುಂಬಿ ತುಳುಕಾಡುತ್ತಿದೆ

Edited By : Nagaraj Tulugeri
PublicNext

PublicNext

04/11/2020 04:12 pm

Cinque Terre

40.24 K

Cinque Terre

5