ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ರಕರ್ತ ಅರ್ನಬ್ ಗೋಸ್ವಾಮಿ ಅರೆಸ್ಟ್

ಮುಂಬೈ : ಮಹಾರಾಷ್ಟ್ರ ಸರ್ಕಾರ ಮತ್ತು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ನಡುವಿನ ಸಮರ ತಾರಕಕ್ಕೇರಿದೆ.

ಬುಧವಾರ ಬೆಳಿಗ್ಗೆ ಅರ್ನಬ್ ಗೋಸ್ವಾಮಿ ಅವರ ಮನೆಗೆ ಬಂದ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ.

ಬಂಧನದ ವೇಳೆ ಪೊಲೀಸರು ತಮ್ಮ ಮೇಲೆ ಹಾಗೂ ಮಗನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಅರ್ನಬ್ ಆರೋಪಿಸಿದ್ದಾರೆ.

ಮುಂಬೈನಲ್ಲಿರುವ ಅರ್ನಬ್ ಮನೆಗೆ ತೆರಳಿದ್ದ ಪೊಲೀಸರು ಅವರನ್ನು ತಮ್ಮ ಜೊತೆ ಬರುವಂತೆ ಸೂಚಿಸಿದ್ದಾರೆ. ಅವರು ನಿರಾಕರಿಸಿದಾಗ ಅಕ್ಷರಶಃ ಎಳೆದೊಯ್ದಿದ್ದಾರೆ.

ಅವರನ್ನು ಪೊಲೀಸ್ ವ್ಯಾನ್ಗೆ ಬಲವಂತವಾಗಿ ತಳ್ಳುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿದೆ.

ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ. ಮಹಾರಾಷ್ಟ್ರ ಸರ್ಕಾರ ಉದ್ದೇಶಪೂರ್ವಕವಾಗಿ ಈ ದಾಳಿ ಮಾಡಿದೆ ಎಂದು ರಿಪಬ್ಲಿಕ್ ಟಿವಿ ಆರೋಪಿಸಿದೆ.

2018ರ ಆತ್ಮಹತ್ಯೆಗೆ ಕುಮ್ಮಕ್ಕು ಆರೋಪ ಪ್ರಕರಣವೊಂದನ್ನು ಪುನಃ ತೆರೆದಿರುವ ಪೊಲೀಸರು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಬ್ ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

Edited By : Nirmala Aralikatti
PublicNext

PublicNext

04/11/2020 09:14 am

Cinque Terre

93.07 K

Cinque Terre

22