ಬೆಂಗಳೂರು- ಆಟವಾಡುತ್ತಲೇ ಲಿಫ್ಟ್ ಗುಂಡಿಗೆ ಬಿದ್ದ 2 ವರ್ಷದ ಮಗು ಮೃತಪಟ್ಟಿದೆ. ನಗರದ ಕೆಂಗೇರಿ ಠಾಣಾ ವ್ಯಾಪ್ತಿಯ ಕೋಡಿಪಾಳ್ಯದಲ್ಲಿ ಈ ದುರ್ಘಟನೆ ನಡೆದಿದೆ.
ನಿರ್ಮಾಣ ಹಂತದಲ್ಲಿದ್ದ ಲಿಫ್ಟ್ ಬಳಿ ಆಟವಾಡುತ್ತಿದ್ದ 2 ವರ್ಷದ ಗಂಡು ಮಗು ವಿನೋದ್ ಲಿಫ್ಟ್ ಗುಂಡಿಗೆ ಬಿದ್ದಿದೆ. ಮಗುವಿನ ತಂದೆ-ತಾಯಿ ಕೂಲಿ ಕಾರ್ಮಿಕರಾಗಿದ್ದು ಕೊಪ್ಪಳ ಮೂಲದವರಾಗಿದ್ದಾರೆ. ಕೋಡಿಪಾಳ್ಯದ ನಿರ್ಮಾಣ ಹಂತದ ಪಕ್ಕದಲ್ಲಿನ ಶೆಡ್ ನಲ್ಲಿ ಈ ದಂಪತಿ ತಮ್ಮ ಮಗುವಿನೊಂದಿಗೆ ವಾಸವಿದ್ದೌರು. ಮೃತ ಮಗು ವಿನೋದ್ ತಂದೆ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿದ್ರೆ ತಾಯಿ ಕೂಲಿ ಕೆಲಸ ಮಾಡುತ್ತಾರೆ. ಇಂದು ಬೆಳಿಗ್ಗೆ ಆಟವಾಡಲು ಅಕ್ಕಪಕ್ಕದ ಮಕ್ಕಳೊಂದಿಗೆ ಹೋಗಿದ್ದ ಮಗು ನೀರು ತುಂಬಿಕೊಂಡಿದ್ದ ಲಿಫ್ಟ್ ಗುಂಡಿಗೆ ಬಿದ್ದು ಸಾವನ್ನಪ್ಪಿದೆ.
PublicNext
30/10/2020 04:49 pm