ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಬ್ರಿ ಮಸೀದಿ ಧ್ವಂಸದ ವಿರುದ್ಧ ಭಾರತೀಯ ಮುಸ್ಲಿಮರು ಸಶಸ್ತ್ರ ಜಿಹಾದ್ ನಡೆಸಿ: ಐಸಿಸ್ ಕರೆ

ನವದೆಹಲಿ: ಭಾರತದ ವಿರುದ್ಧ ಕುಖ್ಯಾತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಸಿಸ್) ನಡೆಸಿರುವ ಮತ್ತೊಂದು ಕುತಂತ್ರ ಬಯಲಾಗಿದೆ.

ಹೌದು. ಬಾಬ್ರಿ ಮಸೀದಿ ಧ್ವಂಸದ ವಿರುದ್ಧ ಭಾರತೀಯ ಮುಸ್ಲಿಮರು ಸಶಸ್ತ್ರ ಜಿಹಾದ್ ನಡೆಸಿ ಸೇಡು ತೀರಿಸಿಕೊಳ್ಳಬೇಕು ಎಂದು ಐಸಿಸ್ ರಹಸ್ಯ ಕರೆ ನೀಡಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಐಸಿಸ್ ತನ್ನ ಆನ್‌ಲೈನ್ ಮ್ಯಾಗಜಿನ್ ‘ವಾಯ್‌್ಸ ಆಫ್‌ ಇಂಡಿಯಾ’ದ 9ನೇ ಆವೃತ್ತಿಯಲ್ಲಿ ಲೇಖನವನ್ನು ಪ್ರಕಟಿಸಿದೆ. ಈ ಮೂಲಕ ಭಾರತದಲ್ಲಿ ಕೋಮುಗಲಭೆ ನಡೆಸಲು ಪ್ರಯತ್ನಿಸಿದೆ.

ಅಷ್ಟೇ ಅಲ್ಲದೆ ನೆರೆ ರಾಷ್ಟ್ರಗಳ ಹಿಂದೂ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲಿರುವ 2019ರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಮರು ನಡೆಸಿದ್ದ ಪ್ರತಿಭಟನೆಗೆ ತನ್ನ ಸಂಪೂರ್ಣ ಬೆಂಬಲವಿದೆ ಎಂದು ಐಸಿಸ್ ಘೋಷಿಸಿದೆ. ಇಂತಹ ಲೇಖನಗಳನ್ನು ಟೆಲಿಗ್ರಾಂ ಆ್ಯಪ್ ಮೂಲಕ ಅಕ್ರಮವಾಗಿ ಮುಸ್ಲಿಂ ಗ್ರೂಪ್‌ಗಳಿಗೆ ಹರಿಬಿಡಲಾಗುತ್ತಿದೆ ಎಂದು ವರದಿಯಾಗಿದೆ.

Edited By : Vijay Kumar
PublicNext

PublicNext

21/10/2020 04:17 pm

Cinque Terre

65.96 K

Cinque Terre

4