ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಯಗೊಂಡ ಲಕ್ಷ್ಮೀ ಫೋಟೋ ಟ್ವೀಟ್ ಮಾಡಿದ ನಟ ದರ್ಶನ್ ಪತ್ನಿ: ಕಾರಣ ಏನು ಗೋತ್ತಾ?

ಬೆಂಗಳೂರು: ದಸರಾ ಸಂಭ್ರಮದ ನವರಾತ್ರಿಯ ಮೊದಲ ದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ, ಗಾಯಗೊಂಡಿರುವ ಲಕ್ಷ್ಮೀ ದೇವರ ಫೋಟೋವನ್ನು ತಮ್ಮ ಟ್ವಿಟರ್ನಲ್ಲಿ ಅಪ್ಲೌಡ್ ಮಾಡಿಕೊಂಡದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಫೋಟೋ ಹಾಕಿದ ವಿಜಯಲಕ್ಷ್ಮೀ ವಿರುದ್ಧ ಕೆಲ ನೆಟ್ಟಿಗರು ಕಿಡಿಕಾರಿದ್ದರೂ ಹಲವರು ಸಮ್ಮತಿ ಸೂಚಿಸಿದ್ದಾರೆ.

ಈ ಫೋಟೋ ಹಾಕಿರುವ ಉದ್ದೇಶ ನಮ್ಮ ದೇಶದಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನ ನೀಡಲಾಗಿದೆ. ಆದರೂ ಹೆಣ್ಣಿನ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ನಿತ್ಯ ಅತ್ಯಾಚಾರ, ಹಲ್ಲೆ, ಹತ್ಯೆಯಂತಹ ಘಟನೆ ಆಘಾತ ನೀಡುತ್ತಲೇ ಇದೆ.

ಇಂತಹ ಸಂದರ್ಭದಲ್ಲಿ ಗಾಯಗೊಂಡಿರುವ ಲಕ್ಷ್ಮೀ ದೇವರ ಫೋಟೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡ ವಿಜಯಲಕ್ಷ್ಮೀ, 'ದೇಶದಲ್ಲಿ ಮಹಿಳೆಯರ ಮೇಲೆಯೇ ಹೆಚ್ಚು ಅಪರಾಧ ನಡೆಯುತ್ತಿದೆ. ಆದರೂ ಈ 9 ದಿನ ಮಹಿಳೆಗೆ ಪೂಜೆ ಮಾಡುತ್ತೇವೆ.

ಇದು ಕಹಿ ಸತ್ಯ' ಎಂದಿದ್ದಾರೆ. ಆ ಮೂಲಕ ದೇಶದಲ್ಲಿ ಮಹಿಳೆಯರ ಮೇಲೆ ನೆಡೆಯುತ್ತಿರುವ ದೌರ್ಜನ್ಯದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಈ ಫೋಟೋಗೆ ಹಲವರು ಕಮೆಂಟ್ಸ್ ಮಾಡಿದ್ದು ಹಿಂದೂ ದೇವರ ಫೋಟೋ ಬಳಸಿದ್ದು ತಪ್ಪು, ಕ್ಷಮೆ ಕೇಳಿ' ಎಂದು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ವಿಜಯಲಕ್ಷ್ಮೀ ಟ್ವೀಟ್ ಗೆ ಪರ-ವಿರೋಧ ಪ್ರತಿಕ್ರಿಯೆ ಬಂದಿದ್ದು, ಸದ್ಯ ಆ ಫೋಟೋ ಡಿಲೀಟ್ ಆಗಿದೆ.

Edited By : Nirmala Aralikatti
PublicNext

PublicNext

18/10/2020 11:11 pm

Cinque Terre

71.18 K

Cinque Terre

10