ನರ್ಮದಾ : ಬರೋಬ್ಬರಿ 7 ತಿಂಗಳ ನಂತರ ಗುಜರಾತ್ನ ನರ್ಮದಾ ನದಿತಟದಲ್ಲಿರುವ ವಿಶ್ವದ ಅತ್ಯಂತ ಎತ್ತರದ ಏಕತಾ ಪ್ರತಿಮೆ ಇಂದಿನಿಂದ ಕಟ್ಟುನಿಟ್ಟಿನ ಕೋವಿಡ್-19 ಮಾರ್ಗ ಸೂಚಿಗಳಿಗೆ ಒಳಪಟ್ಟು ಪ್ರವಾಸಿಗರಿಗೆ ಮುಕ್ತವಾಗಿದೆ.
ಪ್ರತಿದಿನ 2500 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಪುತ್ಥಳಿಗೆ ಒಳಭಾಗದಲ್ಲಿರುವ ವಿಹಂಗಮ ನೋಟದ ಗ್ಯಾಲರಿಗೆ ಕೇವಲ 500 ಪ್ರವಾಸಿಗರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ.
ಇನ್ನೂ ಆನ್ ಲೈನ್ ಮೂಲಕ ಮಾತ್ರ ಟಿಕೆಟ್ ಬುಕಿಂಗ್ ಲಭ್ಯ.
ಗುಜರಾತ್ ನ ನರ್ಮದಾ ಜಿಲ್ಲೆಯ ಕೆವಾಡಿಯ ಎಂಬಲ್ಲಿ ನರ್ಮದಾ ನದಿ ದಂಡೆ ಮೇಲೆ ನಿರ್ಮಿಸಲಾದ ವಿಶ್ವದ ಅತ್ಯಂತ ಎತ್ತರದ ಈ ಪ್ರತಿಮೆಯನ್ನು 2018ರ ಅಕ್ಟೋಬರ್ 31ರಂದು ಪ್ರಧಾನಿ ಲೋಕಾರ್ಪಣೆ ಮಾಡಿದ್ದರು.
PublicNext
17/10/2020 04:43 pm