ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೈ ಎತ್ತಿ ಶರಣಾದ ಉಗ್ರ, ಯೋಧರ ಕಾಲಿಗೆ ಬಿದ್ದ ತಂದೆ- ವಿಡಿಯೋ

ಶ್ರೀನಗರ: ಎನ್‌ಕೌಂಟರ್‌ ಕಾರ್ಯಾಚರಣೆಯ ವೇಳೆ ಯುವ ಉಗ್ರನೊಬ್ಬ ಭಾರತೀಯ ಸೇನೆಗೆ ಶರಣಾಗಿದ್ದು, ಆತನ ತಂದೆ ಯೋಧರ ಕಾಲಿಗೆ ಬಿದ್ದು ಮಗನಿಗೆ ಬುದ್ಧಿ ಹೇಳಿವಂತೆ ಕೇಳಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಯೋಧರು ಬುದ್ಗಾಂನಲ್ಲಿ ಸೇನೆ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಕೈ ಎತ್ತಿ ಬಂದ ಉಗ್ರ ನಾನು ಶರಣಾಗುತ್ತಿದ್ದೇನೆ ಎಂದು ಹೇಳಿದ್ದಾನೆ. ಸೈನಿಕರು, ನಿನ್ನನ್ನು ಏನು ಮಾಡುವುದಿಲ್ಲ. ಹತ್ತಿರ ಬರುವ ಮೊದಲು ಶರ್ಟ್ ತೆಗೆಯಬೇಕು ಎಂದು ಹೇಳಿದ್ದಾರೆ. ಬಳಿಕ ಆತನನ್ನು ಬಂಧಿಸಿದ್ದಾರೆ. ಇತ್ತ ಮಗನಿಗೆ ಮತ್ತೆ ಉಗ್ರರ ಜೊತೆ ಕೈ ಜೋಡಿಸಬೇಡ ಎಂದು ಬುದ್ಧಿವಾದ ಅಂತ ಉಗ್ರನ ತಂದೆ ಯೋಧರ ಕಾಲಿಗೆ ಬಿದ್ದು ಮನವಿ ಮಾಡಿಕೊಂಡಿದ್ದಾನೆ.

ಈ ವಿಚಾರವಾಗಿ ಮಾಹಿತಿ ನೀಡಿರು ಭಾರತೀಯ ಸೇನೆ, 'ಅಕ್ಟೋಬರ್‌ 13ರಂದು ವಿಶೇಷ ಪೊಲೀಸ್‌ ಅಧಿಕಾರಿ 2 ಎಕೆ 47 ರೈಫಲ್‌ ಜೊತೆ ಪರಾರಿಯಾದ ಬಗ್ಗೆ ವರದಿ ಬಂತು. ಇದೇ ದಿನ ಚಡೂರದಿಂದ ಜಹಾಂಗೀರ್ ಬಟ್ ಎಂಬಾತ ನಾಪತ್ತೆಯಾಗಿದ್ದ. ಈತನ ಕುಟುಂಬ ಈತನನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿತ್ತು. ಇಂದು ಬೆಳಗ್ಗೆ ನಡೆದ ಜಂಟಿ ಕಾರ್ಯಾಚರಣೆಯ ವೇಳೆ ಈತ ಪತ್ತೆಯಾಗಿ ಶರಣಾಗಿದ್ದಾನೆ. ಈ ಕಾರ್ಯಾಚರಣೆಯಲ್ಲಿ 4 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ' ಎಂದು ತಿಳಿಸಿದೆ.

Edited By : Vijay Kumar
PublicNext

PublicNext

17/10/2020 10:02 am

Cinque Terre

75.75 K

Cinque Terre

3