ಸರಿ ಸುಮಾರು 20 ಗಂಟೆಗಳ ಕಾಲ ಫ್ರೀಜರ್ ಪೆಟ್ಟಿಗೆಯಲ್ಲಿದ್ದ ವ್ಯಕ್ತಿ ಪವಾಡವೆಂಬಂತೆ ಬದುಕುಳಿದಿರುವ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ.
74 ವರ್ಷದ ವೃದ್ಧನೋರ್ವನನ್ನು ಆಸ್ಪತ್ರೆಯಿಂದ ಮನೆಗ ಕರೆತಂದ ಕುಟುಂಬಸ್ಥರು ಆತನನ್ನು ಫ್ರೀಜರ್ ನಲ್ಲಿರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸದ್ಯ ಆತನನ್ನು ರಕ್ಷಿಸಿರುವ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಯಸ್ಸಿಗೆ ಸಂಬಂಧಿಸಿದ ಕಾಯಿಲೆಯಿಂದಾಗಿ ಕೆಲ ದಿನಗಳ ಹಿಂದಷ್ಟೆ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ವೃದ್ಧನನ್ನು ಅವರ ಸಹೋದರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಹೋಗಿದ್ದರು.
ಇದೇ ವೇಳೆ ಆ ಸಹೋದರ ಫ್ರೀಜರ್ ಬಾಕ್ಸ್ ನ್ನು ಬಾಡಿಗೆಗೆ ಪಡೆದಿದ್ದರು.
ಫ್ರೀಜರ್ ನ್ನು ವಾಪಸ್ ತೆಗೆದುಕೊಂಡು ಹೋಗಲು ಮನೆಗೆ ಬಂದ ವೇಳೆ ಪೆಟ್ಟಿಗೆಯೊಳಗೆ ವೃದ್ಧ ಉಸಿರಾಡುತ್ತಿರುವ ಅಂಶ ಬಯಲಾಗಿದೆ.
ಇನ್ನು ಈ ಸಂಬಂಧ ಕುಟುಂಬಸ್ಥರ ವಿರುದ್ಧ ಪೊಲೀಸರು ನಿರ್ಲಕ್ಷ್ಯದ ನಡುವಳಿಕೆ ಹಾಗೂ ಜೀವಕ್ಕೆ ಅಪಾಯ ತಂದೊಡ್ಡಿದ್ದ ಕಾರಣದಡಿ ಪ್ರಕರಣ ದಾಖಲಿಸಿದ್ದಾರೆ.
PublicNext
15/10/2020 07:35 am