ಅಹಮದಾಬಾದ್ : 'ಏಕತ್ವಂ' ಶೀರ್ಷಿಕೆಯ ವಿಡಿಯೊ ಜಾಹೀರಾತಿಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಭರಣ ಸಂಸ್ಥೆ ತನಿಷ್ಕ್ ಇದೀಗ ಹಿಂದೂಗಳ ಕ್ಷಮೆ ಕೋರಿದೆ.
ಗುಜರಾತ್ನ ಕಛ್ ಜಿಲ್ಲೆಯ ಗಾಂಧಿಧಾಮ ಪಟ್ಟಣದಲ್ಲಿರುವ ಸಂಸ್ಥೆಯ ಮಳಿಗೆಯ ದ್ವಾರದಲ್ಲಿ ಕ್ಷಮಾಪಣೆ ಪತ್ರ ಪ್ರಕಟಿಸಲಾಗಿದೆ.
ವಿಡಿಯೊ ಜಾಹೀರಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ಅನೇಕ ಕಡೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಏಕತೆ ವಿಷಯವನ್ನು ಆಧರಿಸಿ ಪ್ರಕಟಿಸಲಾಗಿರುವ ಆಭರಣದ ಜಾಹೀರಾತಿನಲ್ಲಿ ಮುಸ್ಲಿಂ ಕುಟುಂಬದಲ್ಲಿರುವ ಹಿಂದೂ ಮಹಿಳೆಗೆ ಸೀಮಂತ ಕಾರ್ಯಕ್ರಮ ಆಯೋಜಿಸುವ ದೃಶ್ಯಗಳಿದ್ದವು.
ಇಡೀ ಕುಟುಂಬ ಹಿಂದೂ ಸಂಪ್ರದಾಯದಂತೆ ಸಿದ್ಧತೆ ಮಾಡಿ ಮಹಿಳೆಗೆ ಸಂತಸ ನೀಡುವ ವಾತಾವರಣದ ದೃಶ್ಯಗಳಿದ್ದವು.
PublicNext
14/10/2020 04:18 pm