ಹೊಸದಿಲ್ಲಿ : ಭಾರತದ ಮಾಜಿ ಫುಟ್ಬಾಲ್ ನಾಯಕ ಕಾರ್ಲ್ಟನ್ ಚಾಪ್ಮನ್ ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
49 ವರ್ಷ ಚಾಪ್ಮನ್ ತೀವ್ರ ಬೆನ್ನುನೋವಿನ ಕಾರಣಕ್ಕೆ ರವಿವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು.
ಚಾಪ್ಮನ್ ಅವರು 1997-98 ರಲ್ಲಿ ಫುಟ್ಬಾಲ್ ದಿಗ್ಗಜರಾದ ಐಎಂ ವಿಜಯನ್, ಜೋ ಪಾಲ್ ಹಾಗೂ ರಾಮನ್ ವಿಜಯನ್ ಅವರೊಂದಿಗೆ ಆಡಿದ್ದರು.
1997ರಲ್ಲಿ ದಕ್ಷಿಣ ಏಶ್ಯ ಫುಟ್ಬಾಲ್ ಫೆಡರೇಶನ್ ಗೋಲ್ಡ್ ಕಪ್ನ್ನು ಜಯಿಸಿದ್ದರು.
ಟಾಟಾ ಫುಟ್ಬಾಲ್ ಅಕಾಡಮಿಯಲ್ಲಿ ಪಳಗಿರುವ ಚಾಪ್ಮನ್ 1993ರಲ್ಲಿ ಈಸ್ಟ್ ಬಂಗಾಳ ತಂಡವನ್ನು ಸೇರಿದ್ದರು.
PublicNext
12/10/2020 01:16 pm