ಮಡಿಕೇರಿ: ಅಮೆರಿಕದಲ್ಲಿ ಕೊಡವ ಸಂಪ್ರದಾಯದಂತೆ ಸಲಿಂಗ ಮದುವೆಯಾದ ಯುವಕನ ವಿರುದ್ಧ ಕೊಡವ ಜನಾಂಗದವರು ಸಿಡಿದೆದಿದ್ದು, ಆತನನ್ನು ಸಮುದಾಯದಿಂದ ಹೊರ ಹಾಕಲು ಮುಂದಾಗಿದ್ದಾರೆ.
ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಈ ಮದುವೆ ಕೊಡವ ಜನಾಂಗವನ್ನು ಕೆರಳಿಸಿದ್ದು, ಸಮಾಜದಿಂದಲೇ ಮದುಮಗನನ್ನು ಹೊರಗಿಡಲು ಸಜ್ಜಾಗಿದೆ. ಕೊಡಗು ಮೂಲದ ಶರತ್ ಪೊನ್ನಪ್ಪ (38) ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್ ಎಂಬಾತನನ್ನು ಮದುವೆ ಆಗಿದ್ದಾನೆ. ವೈದ್ಯನಾಗಿರುವ ಶರತ್ ಪೊನ್ನಪ್ಪ ಅಮೆರಿಕಾಗೆ ತೆರಳಿ 20 ವರ್ಷ ಆಗುತ್ತಾ ಬಂದಿದೆ. ಅಲ್ಲಿ ಸಂದೀಪ್ ದೋಸಾಂಜ್ ಪರಿಚಯವಾಗಿದ್ದು, ಇಬ್ಬರಿಗೂ ಲವ್ ಆಗಿದೆ. ಪ್ರೀತಿ ಬೆಳೆದು ಕೊನೆಗೆ ಕಳೆದ ಸೆಪ್ಟೆಂಬರ್ 26 ರಂದು ಮದುವೆಯನ್ನೂ ಮಾಡಿಕೊಂಡಿದ್ದಾರೆ. ಅದೂ ಕೊಡವ ಸಂಪ್ರದಾಯದ ಶೈಲಿಯಲ್ಲಿ ಸಲಿಂಗ ಮದುವೆ ಸಮಾರಂಭದಲ್ಲಿ ಮದು ಮಕ್ಕಳ ಸ್ನೇಹಿತರು ಭಾಗಿಯಾಗಿ ಶುಭ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆ ವಿಡಿಯೋ, ಫೋಟೋ ವೈರಲ್ ಆಗಿದೆ.
ಈ ಕುರಿತು ಕೊಡವ ಮುಖಂಡ ದೇವಯ್ಯ ಮಾತಾನಾಡಿ, "ಈ ರೀತಿಯಲ್ಲಿ ಮದುವೆ ಆಗಿರುವುದು ಹೆಚ್ಚು ದಿನ ಬಾಳುವುದಕ್ಕೆ ಅಲ್ಲ. ಪ್ರಕೃತಿ ವಿರೋಧವಾಗಿ ವಿವಾಹ ಆಗಿದ್ದಾರೆ. ಅವರಿಗೆ ಯಾರೂ ಕ್ಷಮೆ ನೀಡಬಾರದು" ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
08/10/2020 07:59 pm