ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಕುಮಟಾದಲ್ಲಿ ವಿಕ್ರಮ ತೈಲನ ತಿಗಳಾರಿ ಶಾಸನ ಪತ್ತೆ

ಕಾರವಾರ: ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲಾ ಅವರು ಉತ್ತರ ಕನ್ನಡ ಜಿಲ್ಲಾ ಶಾಸನ ಸಂಪುಟದ ರಚನೆಯ ಹಿನ್ನೆಲೆಯಲ್ಲಿ ಕುಮಟಾ ತಾಲೂಕಿನ ಕೋಡ್ಕಣಿಯಲ್ಲಿ ಕೈಗೊಂಡ ಎರಡನೇ ಹಂತದ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಅಲ್ಲಿನ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿನ ತೆಂಗಿನ ಮರದ ಬುಡದಲ್ಲಿ ಹನ್ನೆರಡನೇ ಶತಮಾನದ ಅವಧಿಗೆ ಸೇರಿದ ಹೊಸ ಅಪ್ರಕಟಿತ ತಿಗಳಾರಿ ಲಿಪಿ ಮತ್ತು ಕನ್ನಡ ಭಾಷೆಯಲ್ಲಿರುವ ಶಾಸನ ಪತ್ತೆ ಮಾಡಿದ್ದಾರೆ.

ಈಗ ದೊರೆತಿರುವ ತಿಗಳಾರಿ ಲಿಪಿಯಲ್ಲಿರುವ ಈ ಶಾಸನ ಒಟ್ಟೂ ಮೂವತ್ತೆರಡು ಸಾಲುಗಳಲ್ಲಿ ಬರೆದಿದ್ದು, ಶಿಶುಗಲಿ ಪಾಂಡ್ಯರ ರಾಜ ವಿಕ್ರಮ ತೈಲನದ್ದಾಗಿದೆ. ಹೆರ್ಗ್ಗಡಹೇಯ (ಬಹುಶಃ ಈಗಿನ ಹೆಗಡೆ) ಗ್ರಾಮದಲ್ಲಿ ಲಿಷ್ಣಮನ ತಮ್ಮ ನಾರಾಯಣ ಮತ್ತು ಸೀಗೆಯ ನಾರಾಯಣರು ಪ್ರತಿಷ್ಠಾಪಿಸಿದ ದೇವರಿಗೆ ನಂದಾದೀಪ ಮತ್ತು ನೈವೇದ್ಯಕ್ಕಾಗಿ ವಿಕ್ರಮತೈಲ ಭೂಮಿದಾನ ನೀಡಿದ ವಿಷಯ ತಿಳಿಸುತ್ತದೆ. ಮುಂದುವರೆದ ಶಾಸನ ಹಟ್ಟಣದ (ಪಟ್ಟಣದ) ತೈಲನೂ ದೇವರಿಗೆ ಭೂಮಿ ಮತ್ತು ಹಣದಾನ ನೀಡಿದ್ದನ್ನು ಶಾಸನ ಉಲ್ಲೇಖಿಸುತ್ತದೆ. ಈ ಶಾಸನದಲ್ಲಿ ಸ್ಪಷ್ಟವಾದ ತೇದಿಯ ಉಲ್ಲೇಖವಿಲ್ಲ. ಕೇವಲ ಮೀನದ ಬೃಹಸ್ಪತಿ ಎಂದು ಶಾಸನ ಮುಂದುವರೆಯುತ್ತದೆ. ಗುಂಡಬಾಳ ಮತ್ತು ತಂಬೊಳ್ಳಿಯಲ್ಲಿ ಈ ಮೊದಲು ದೊರೆತ ಶಾಸನಗಳ ಆಧಾರದಿಂದ ವಿಕ್ರಮ ತೈಲನ ಆಳ್ವಿಕೆ ಕ್ರಿ.ಶ. 1119 ರಿಂದ 1125 ಎಂದು ವಿದ್ವಾಂಸರು ಗುರುತಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

06/09/2022 12:09 pm

Cinque Terre

14.95 K

Cinque Terre

0

ಸಂಬಂಧಿತ ಸುದ್ದಿ