ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಕನಿಕಲ ಬಂಡೆ ಗ್ರಾಮ ಸಂಪೂರ್ಣ ಜಲಾವೃತ

ಪಾವಗಡ: ಪಾವಗಡದಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಕನಿಕಲ ಬಂಡೆ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಬರಪೀಡಿತ ತಾಲೂಕು ಎಂಬ ಹಣೆ ಪಟ್ಟಿ ಇದ್ದ ಪಾವಗಡದಲ್ಲೂ ಮಳೆ ಈ ಬಾರಿ ಸದ್ದು ಮಾಡುತ್ತಿದೆ.

ನಿರಂತರ ಮಳೆಗೆ ಗ್ರಾಮವೆ ಜಲಾವೃತ ಜನ ಜೀವನ ಅಸ್ತವ್ಯಸ್ತ ಗೊಂಡಿದ್ದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಕನ್ನಮಿಡಿ, ಬ್ಯಾಡನೂರು, ಸೇರಿದಂತೆ ಆಂಧ್ರ ಪ್ರದೇಶದ ನೀರು ಹರಿಯುತ್ತಿರುವ ಕಾರಣ ಸಮಸ್ಯೆ ಉಲ್ಬಣಗೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರ ಒತ್ತಾಯ ಮಾಡಿದ್ದಾರೆ.

-ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್, ತುಮಕೂರು

Edited By : Shivu K
PublicNext

PublicNext

01/09/2022 08:46 am

Cinque Terre

89.68 K

Cinque Terre

0

ಸಂಬಂಧಿತ ಸುದ್ದಿ