ಗದಗ: ತುಂಬಿ ಹರಿಯುತ್ತಿರುವ ಹಳ್ಳ. ನೀರಿನ ರಭಸನ್ನೂ ಲೆಕ್ಕಿಸದೇ ಹಳ್ಳ ದಾಟುತ್ತಿರುವ ಪ್ರಯಾಣಿಕರು. ಇನ್ನೊಂದೆಡೆ ಹಳ್ಳದಲ್ಲೇ ಯುವಕರ ಹುಚ್ಚಾಟ.ಇನ್ನೂ ಹಳ್ಳ ದಾಟೇ ದಾಟುತ್ತೇನೆ ಎಂದು ಹರಸಾಹಸ ಪಟ್ಟು ಸಿಕ್ಕಿಹಾಕಿಕೊಂಡ ಆಟೋ. ಈ ಎಲ್ಲ ದೃಶ್ಯ ಕಂಡು ಬಂದಿದ್ದು ಗದಗ ಸಮೀಪದ ನಾಗಾವಿ ಮತ್ತು ಬೆಳದಡಿ ಗ್ರಾಮದ ಮಧ್ಯೆ. ಗದಗ ನಗರದಿಂದ ನಾಗಾವಿ ಬೆಳದಡಿ ಮಾರ್ಗವಾಗಿ ಶಿರಹಟ್ಟಿ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಪರದಾಡ್ತಿದ್ದಾರೆ. ಇದೇ ಹಳ್ಳಕ್ಕೆ ಮೇಲ್ಸೆತುವೆ ನಿರ್ಮಿಸುವ ಕಾಮಗಾರಿಗೆ ಶಂಕು ಸ್ಥಾಪನೆಯಾಗಿ ನಾಲ್ಕು ತಿಂಗಳು ಕಳೆದ್ರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ.
ಇನ್ನು ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ರವಿವಾರ ರಾತ್ರಿ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಪೇಟಬಣದಲ್ಲಿ ಸುಮಾರು ಮನೆಗಳು ಧರೆಗೂಳಿದಿವೆ. ರಾತ್ರಿ ಸುರಿದ ಧಾರಾಕಾರ ಮಳೆಗೆ ಬಸಪ್ಪ ತಿರಕ್ಕಪ್ಪ ಶರಸೂರಿ ಅನ್ನೋರ ಮನೆ ಮೇಲ್ಛಾವಣಿ ಕುಸಿದು ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಸಂಪೂರ್ಣ ಬೀಳಬಹುದು ಎಂಬ ಭಯಕ್ಕೆ ಮನೆಯನ್ನು ಖಾಲಿ ಮಾಡಿಕೊಂಡು ಹೊಲಗಳಲ್ಲಿ ಗುಡಿಸಲು ಹಾಕಿಕಿಕೊಂಡು ಜೀವನ ನಡೆಸಲು ಸಿದ್ದರಾಗಿ ಮನೆ ಬಿಡುತ್ತಿದ್ದಾರೆ. ಇಷ್ಟೆಲ್ಲ ಆದ್ರೂ ಪುರಸಭೆ ಅಧಿಕಾರಿಗಳು ಹಾಗೂ ತಹಶೀಲ್ದಾರರು ಯಾರೂ ಸಹ ಇತ್ತಕಡೆ ಸುಳಿದಿಲ್ಲ ಅನ್ನೋದು ಸ್ಥಳಿಯರ ಆರೋಪವಾಗಿದೆ.
ಒಟ್ನಲ್ಲಿ 15 ದಿನಗಳಿಂದ ಶಾಂತವಾಗಿದ್ದ ಮಳೆ ಮತ್ತೆ ಭೋರ್ಗರೆಯುತ್ತಿದ್ದು ಗದಗನಲ್ಲಿ ರೈತರು, ಸಾಮಾನ್ಯ ಜನರಿಗೆ ನಷ್ಟವನ್ನೂಂಟು ಮಾಡಿದ್ದಂತೂ ಸತ್ಯ.
PublicNext
30/08/2022 08:20 am