ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ನಿರಂತರ ಮಳೆಗೆ ತುಂಬಿ ಹರಿದ ಹಳ್ಳ: ಬನ್ನಿಕೊಪ್ಪದ ಗ್ರಾಮಸ್ಥರ ಪರದಾಟ, ವಿದ್ಯಾರ್ಥಿಗಳಿಗೆ ಸಂಕಟ

ಗದಗ: ಗದಗ ಜಿಲ್ಲೆಯಲ್ಲಿ ಮತ್ತೆ ಮಳೆರಾಯ ಅವಾಂತರ ಸೃಷ್ಟಿಸುತ್ತಿದ್ದಾನೆ. ಹೌದು..ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ದುಸ್ಥಿತಿ ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ತಾಲೂಕಿನ ಬಹುತೇಕ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.

ಅದರಲ್ಲೂ ಮಜ್ಜೂರಿನ ಹಳ್ಳವಂತೂ ಮಳೆ ನೀರಿನಿಂದಾಗಿ ತುಂಬಿ ಒಡೆದು ಹೋದ ಪರಿಣಾಮ ಬನ್ನಿಕೊಪ್ಪ ಗ್ರಾಮದ ಹಳ್ಳಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಇದರಿಂದಾಗಿ ಹಳ್ಳದ ದಡದಲ್ಲಿರುವ ಬಸ್ ನಿಲ್ದಾಣ, ಈಶ್ವರ ದೇವಸ್ಥಾನ ಹಾಗೂ ಮಸೀದಿಯತ್ತ ಹಳ್ಳದ ನೀರು ನುಗ್ಗಿದೆ. ಅಲ್ಲದೇ ಪಕ್ಕದಲ್ಲಿರುವ ಪ್ರೌಢಶಾಲೆ ಮೈದಾನಕ್ಕೂ ಹಳ್ಳದ ನೀರು ನುಗ್ಗಿದ್ದು‌ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಟ ನಡೆಸುವಂತಾಗಿದೆ.

ಇನ್ನು ಹಳ್ಳದ ಸೇತುವೆ ಸಂಪೂರ್ಣ ಮುಳುಗಿ ಹೋಗಿದ್ದು, ಗ್ರಾಮದಿಂದ ಹಳ್ಳ ದಾಟಿ ಶಾಲೆಗೆ ಬರುವ ವಿದ್ಯಾರ್ಥಿಗಳು ಹರಸಾಹಸ ಪಡಬೇಕಾಗಿದೆ. ಸ್ಥಳೀಯ‌ ಶಾಸಕ ರಾಮಣ್ಣ ಲಮಾಣಿ ಅವರಿಗೆ ಈಗಾಗಲೇ ಹಲವಾರು‌ ಬಾರಿ‌ ಸುಸಜ್ಜಿತ ಎತ್ತರದ ಸೇತುವೆ ನಿರ್ಮಿಸಿ ಅಂತ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಅಂತ ಗ್ರಾಮಸ್ಥರು ಆರೋಪಿಸುತ್ತಿದ್ದು, ಇನ್ನಾದರೂ ಹಳ್ಳದ ನೀರು ಸರಾಗವಾಗಿ ಹರಿಯುವಂತೆ ಕ್ರಮ ವಹಿಸ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.

Edited By : Manjunath H D
PublicNext

PublicNext

29/08/2022 05:08 pm

Cinque Terre

30.8 K

Cinque Terre

0

ಸಂಬಂಧಿತ ಸುದ್ದಿ