ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನಕಪುರ : ಸುರಿಯುತ್ತಿರುವ ಭಾರೀ ಮಳೆಗೆ ಕೊಚ್ಚಿ ಹೋದ ರಸ್ತೆ

ಕನಕಪುರ : ಕಳೆದ 3 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಾಲ್ಲೂಕಿನ ರಾಚಯ್ಯನ ದೊಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.

ಇದೇ ಮಾರ್ಗವಾಗಿ ರಾಚಯ್ಯದೊಡ್ಡಿ ಗ್ರಾಮದಿಂದ ಕರಿಕಲ್ ದೊಡ್ಡಿ ಬಾಣಂತಮಾರಮ್ಮ ಅರಣ್ಯ ಪ್ರದೇಶ ಹಾಗೂ ಇತರೆಡೆಗೆ ಈ ರಸ್ತೆಯ ಮೂಲಕವೇ ತೆರಳಬೇಕಿದ್ದು ಈಗ ಮಳೆಗೆ ರಸ್ತೆ ಕೊಚ್ಚಿ ಹೋಗಿದ್ದು ಜನ ಪರದಾಡುವಂತಾಗಿದೆ.

ಇದರಿಂದಾಗಿ ಈ ಭಾಗದ ಜನರಿಗೆ ತೀವ್ರ ತೊಂದರೆ ಉಂಟಾಗಿರುವುದರಿಂದ ಶೀಘ್ರವೇ ತಾಲ್ಲೂಕು ಆಡಳಿತ ಮತ್ತು ಜನಪ್ರತಿನಿಧಿಗಳು ರಸ್ತೆ ಕಾಮಗಾರಿ ಮಾಡಿ ಜನರಿಗೆ ಅನುಕೂಲವಾಗುವಂತೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Edited By : Shivu K
PublicNext

PublicNext

29/08/2022 12:32 pm

Cinque Terre

32.75 K

Cinque Terre

0