ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿಯಲ್ಲಿ ಭಾರಿ ಮಳೆ: ಕುಸಿದು ಬಿದ್ದ ಎರಡು ಅಂತಸ್ತಿನ ಮನೆ

ಬೆಳಗಾವಿ: ಕಳೆದ ಮೂರನಾಲ್ಕು ದಿನಗಳಿಂದ ಬೆಳಗಾವಿಯಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಜನ ಮನೆ ಬಿಟ್ಟು ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಮನೆಯಲ್ಲಿಯೇ ಇದ್ದರೆ ಯಾವಾಗ ಮನೆ ಕುಸಿದು ಬೀಳುತ್ತದೆಯೋ ಎಂಬ ಆತಂಕ ನಿರ್ಮಾಣವಾಗಿದೆ. ಅಲ್ಲದೇ ನಗರದ ವಿವಿಧ ಕಡೆ ಮನೆಗಳು ಕೂಡ ಧರೆಗೆ ಉರುಳಿವೆ.

ಹೌದು. ಬೆಳಗಾವಿಯಲ್ಲಿ ವರುಣರಾಯ ನಿಜಕ್ಕೂ ಅಬ್ಬರಿಸಿ ಬೊಬ್ಬರಿಯುತ್ತಿದ್ದಾನೆ. ನಿರಂತರವಾಗಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.ಇದರಿಂದ ಜನರು ತೀವ್ರ ಪರದಾಡುವಂತಾಗಿದ್ದು, ಅನಗೋಳದ ವಾಡಾ ಕಂಪೌಂಡ್‍ನ ಅಶೋಕ ಬೆಂಡಿಗೇರಿ ಎಂಬುವವರಿಗೆ ಸೇರಿದ ಎರಡು ಅಂತಸ್ತಿನ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಅಲ್ಲದೇ ನಗರದ ವಿವಿಧ ಕಡೆ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ನದಿಯ ಸ್ವರೂಪ ಪಡೆದುಕೊಂಡಿವೆ. ಭಾರಿ ಮಳೆಗೆ ಬೆಚ್ಚಿ ಬಿದ್ದಿ ಜನ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ.

Edited By :
PublicNext

PublicNext

08/08/2022 01:20 pm

Cinque Terre

40.75 K

Cinque Terre

0