ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಲೋಕಾರ್ಪಣೆಗೂ ಮೊದಲೇ ತುಂಬಿಹರಿದ ಯರಗೋಳ ಜಲಾಶಯ

ಕೋಲಾರ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿಮಳೆಗೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರಗೋಳ ಗ್ರಾಮದ ಬಳಿ ನಿರ್ಮಿಸಿರೊ ಯರಗೋಳ ಜಲಾಶಯ ಭರ್ತಿಯಾಗಿ ಹರಿಯುತ್ತಿದೆ.

ಸದ್ಯ ಬಂಗಾರಪೇಟೆಯ ಪ್ರವಾಸಿಗರ ಆಕರ್ಷಣೆಯ ತಾಣವಾಗುತ್ತಿರುವ ಯರಗೋಳ ಜಲಾಶಯ 375ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ. 348ಕೋಟಿ ವೆಚ್ಚದಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ.2006ರಲ್ಲಿ ಅಂದಿನ C.M. ಕುಮಾರಸ್ವಾಮಿ ಡ್ಯಾಂ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ತಮಿಳುನಾಡಿಗೆ ವ್ಯರ್ಥವಾಗಿ ಹರಿದು ಹೋಗ್ತಿದ್ದ ನೀರಿಗೆ ಅಡ್ಡಲಾಗಿ ಯರಗೋಳ ಡ್ಯಾಂ ಕಟ್ಟಲಾಗಿದೆ. ಇದರಿಂದ ಬಂಗಾರಪೇಟೆ, ಮಾಲೂರು & ಕೋಲಾರ ನಗರಗಳಿಗೆ ಹಾಗೂ ಮಾರ್ಗ ಮದ್ಯೆದ

45 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಜಲಾಶಯ ನಿರ್ಮಾಣ ಮಾಡಲಾಗಿದೆ.

ಈ ಜಲಾಶಯ131ಅಡಿ ಎತ್ತರ, 1358 ಅಡಿ ಅಗಲ ಇದೆ. ಮೊದಲಬಾರಿಗೆ ಡ್ಯಾಂ ತುಂಬಿರುವುದರಿಂದ, ಸದ್ಯ ಪ್ರವಾಸಿ ತಾಣ ಆಗ್ತಿದೆ. ಡ್ಯಾಂಗೆ ನಿರೀಕ್ಷೆಗೂ ಮೀರಿ ನೀರು ಬಂದಿರುವುದರಿಂದ ಸಹಜವಾಗಿ ಸ್ಥಳೀಯರಲ್ಲಿ ಸಂತೋಷ ಮನೆಮಾಡಿದೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಕೋಲಾರ

Edited By : Nagesh Gaonkar
PublicNext

PublicNext

04/08/2022 08:14 pm

Cinque Terre

24.96 K

Cinque Terre

1

ಸಂಬಂಧಿತ ಸುದ್ದಿ