ಹಾವೇರಿ: ನಾಯಿಯ ದಾಳಿಯಿಂದ ತಪ್ಪಿಸಿಕೊಳ್ಳಲು ಹರಿಯುವ ನದಿಗೆ ಹಾರಿದ ಕೃಷ್ಣಮೃಗ ಹಾವೇರಿ ಜಿಲ್ಲೆಯ ಸಂಗೂರು ಗ್ರಾಮದ ವರದಾ ನದಿಯ ಬಳಿ ಕೃಷ್ಣಮೃಗ ಪ್ರಾಣಿಯನ್ನ ನೋಡಿ ನಾಯಿಯೊಂದು ಕೃಷ್ಣಮೃಗ ಪ್ರಾಣಿಯನ್ನು ಬೆನ್ನು ಹತ್ತಿದೆ.
ಈ ವೇಳೆ ಗಾಬರಿಗೊಂಡ ಕೃಷ್ಣಮೃಗ ಪ್ರಾಣಿ ಹೇಗಾದರೂ ಮಾಡಿ ನಾಯಿಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಳ್ಳಬೇಕು ಎಂದು ಹರಿಯುತ್ತಿರುವ ವರದಾ ನದಿಗೆ ಹಾರಿದೆ ಹರಿಯುವ ನೀರಿನಲ್ಲಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಕೃಷ್ಣಮೃಗ ಹರಸಾಹಸಪಟ್ಟಿತು. ಅಲ್ಲಿನ ಜನರು ಗದ್ದಲವನ್ನು ನೋಡಿ ಕೃಷ್ಣಮೃಗ ಮತ್ತಷ್ಟು ಹೆದರಿ ದಡ ಸೇರದೆ ಆಚೆ ಇಚೆ ಓಡಾಡಿ ಬಹಳ ಕಷ್ಟ ಪಟ್ಟಿತು ಕೃಷ್ಣಮೃಗದ ತೊಳಲಾಟ ಕಂಡು ಅಲ್ಲಿನ ಗ್ರಾಮಸ್ಥರು ಮರುಗಿದರು.
PublicNext
18/07/2022 08:30 pm