ಕುಂಬಳೆ: ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಪ್ರದೇಶವಾದ ಕಾಸರಗೋಡು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳಿಗೆ ನೀರು ತುಂಬಿ ಜಲಾವೃತವಾಗಿದೆ ಹಾಗೂ ಕೆಲ ಕಡೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕೃತಕನರೆ ಉಂಟಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಧಾರಾಕಾರ ಬಿಡದೆ ಸುರಿದ ಜಡಿಮಳೆಗೆ ಜಿಲ್ಲೆಯ ಕುಂಬಳೆ ರೈಲು ನಿಲ್ದಾಣದ ಒಳಗೆ ಮಳೆ ನೀರು ನುಗ್ಗಿದೆ.
ಏಕಾಏಕಿ ರೈಲು ನಿಲ್ದಾಣದ ಒಳಗಡೆ ನುಗ್ಗಿದ ಮಳೆ ನೀರು, ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಗಾಬರಿಗೊಳಿಸಿದೆ. ನಿಲ್ದಾಣದ ಒಳಗಡೆ ನುಗ್ಗಿದ ನೀರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
05/07/2022 03:59 pm