ಚಾಮರಾಜನಗರ: ಜಿಲ್ಲೆಯ ಜ್ಯೋತಿಗೌಡನಪುರ ಗ್ರಾಮದ ಹೊರವಲಯದಲ್ಲಿ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. ಜಮೀನಿನಲ್ಲಿ ಹೆಬ್ಬಾವನ್ನು ಕಂಡ ಕೃಷಿ ಕಾರ್ಮಿಕರು ಬೆಚ್ಚಿ ಬಿದ್ದು ದಿಕ್ಕಾಪಾಲಾಗಿ ಓಡಿದ್ದಾರೆ.
ನಂತರ ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ನೇಕ್ ಚಾಂಪು ಜೊತೆ ಸ್ಥಳಕ್ಕೆ ಬಂದಿದ್ದಾರೆ. ಒಂದು ತಾಸು ಕಾರ್ಯಾಚರಣೆ ನಡೆಸಿ ಪೊದೆಯಲ್ಲಿ ಅವಿತಿದ್ದ ಹೆಬ್ಬಾವನ್ನು ಹೆಬ್ಬಾವನ್ನು ಸೆರೆಹಿಡಿದಿದ್ದಾರೆ. ಸುಮಾರು 15 ಅಡಿ ಉದ್ದರ ಹೆಬ್ಬಾವನ್ನು ನೋಡಿ ಸ್ವತಃ ಅರಣ್ಯಾಧಿಕಾರಿಗಳೇ ದಂಗಾಗಿದ್ದಾರೆ. ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಹೆಬ್ಬಾವನ್ನು ಬಿಟ್ಟ ಅರಣ್ಯಾಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
PublicNext
02/07/2022 10:56 pm