ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ಯಾರೀಸ್ : ಜಾಗತಿಕವಾಗಿ 6.7 ಮಿಲಿಯನ್ ಜನರ ಸಾವಿಗೆ ಕಾರಣವಾದ ವಾಯು ಮಾಲಿನ್ಯ

ಪ್ಯಾರಿಸ್ : ಎಲ್ಲೇಡೆ ಹೆಚ್ಚುತ್ತಿರುವ ಕಾರ್ಖಾನೆ ಹಾಗೂ ವಾಹನಗಳ ವಾಯು ಮಾಲಿನ್ಯ ಸೇರಿದಂತೆ ಇತರೆ ವಾಯು ಮಾಲಿನ್ಯದಿಂದಾಗಿ 2019ರಲ್ಲಿ ಜಾಗತಿಕವಾಗಿ ಸುಮಾರು 9 ಮಿಲಿಯನ್ ಜನರ ಅಕಾಲಿಕ ಮರಣಕ್ಕೆ ಕಾರಣವಾಗಿದೆ ಎಂಬ ಹೊಸ ಜಾಗತಿಕ ವರದಿ ತಿಳಿಸಿದೆ.

ಹೌದು ! ವಾಹನಗಳು, ಕಾರ್ಖಾನೆಗಳು ಹೊರಸೂಸುವ ವಿಷ ಗಾಳಿಯ ಉಸಿರಾಟದಿಂದ ಸಾವುಗಳ ಸಂಖ್ಯೆ ಹೆಚ್ಚಾಗುತ್ತಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಅದರಂತೆ ಗಾಳಿ, ನೀರು ಮತ್ತು ಮಣ್ಣಿನಲ್ಲಿ ಮಾನವ ವಿಸರ್ಜಿಸುತ್ತಿರುವ ತ್ಯಾಜ್ಯವು ಸಹ ಮಾನವನ ಸಾವಿಗೆ ಕಾರಣವಾಗಿದೆ, ಅಷ್ಟೇ ಅಲ್ಲದೇ, ಮನುಷ್ಯರಿಗೆ ಸಂಬಂಧಿಸಿದಂತೆ ಹೃದಯ ಕಾಯಿಲೆ, ಕ್ಯಾನ್ಸರ್, ಉಸಿರಾಟದ ತೊಂದರೆಗಳು, ಅತಿಸಾರ ಮತ್ತು ಇತರ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದಿದ್ದಾರೆ.

ಮಾಲಿನ್ಯ ಮತ್ತು ಆರೋಗ್ಯದ ಮೇಲಿನ ಲ್ಯಾನ್ಸೆಟ್ ಆಯೋಗವು ಜಾಗತಿಕ ಆರೋಗ್ಯದ ಮೇಲೆ ಮಾಲಿನ್ಯದ ಪರಿಣಾಮವು ಯುದ್ಧ, ಭಯೋತ್ಪಾದನೆ, ಮಲೇರಿಯಾ, ಎಚ್‌ಐವಿ, ಕ್ಷಯರೋಗ, ಡ್ರಗ್ಸ್ ಮತ್ತು ಆಲ್ಕೋಹಾಲ್‌ಗಿಂತ ಹೆಚ್ಚು ಪರಿಣಾಮ ಬೀರಿದೆ. ಮಾಲಿನ್ಯವು ಮಾನವನ ಆರೋಗ್ಯ ಅಸ್ತಿತ್ವದ ಬೆದರಿಕೆಯಾಗಿದ್ದು, ಆಧುನಿಕ ಸಮಾಜದ ಸಮತೋಲನ ಪರಿಸರಕ್ಕೆ ಅಪಾಯ ತೊಂದೊಡ್ಡಿದೆ‌.

ಈ ಎಲ್ಲಾ ಕಾರಣಗಳಿಂದ ವಾಯು ಮಾಲಿನ್ಯವು 2019 ರಲ್ಲಿ ಜಾಗತಿಕವಾಗಿ ಒಟ್ಟು 6.7 ಮಿಲಿಯನ್ ಸಾವಿಗೆ ಕಾರಣವಾಗಿದೆ.

Edited By : Vijay Kumar
PublicNext

PublicNext

18/05/2022 02:43 pm

Cinque Terre

27.92 K

Cinque Terre

0