ನವದೆಹಲಿ: ದೇಶದ ರಾಜಧಾನಿ ಸೇರಿ ದೇಶದೆಲ್ಲೆಡೆ ಗರಿಷ್ಟ ತಾಪಮಾನ ದಾಖಲಾಗಿದೆ. ಹೆಚ್ಚುತ್ತಿರುವ ಬಿಸಿ ಗಾಳಿಯಿಂದ ಜನ ತತ್ತರಿಸಿದ್ದಾರೆ. ದೆಹಲಿಯಲ್ಲಿ ಭಾನುವಾರ 49 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
ಹರಿಯಾಣ ಗಡಿ ಸಮೀಪದ ಮುಂಗೇಶ್‌ಪುರದಲ್ಲಿ ಬಿಸಿ ಗಾಳಿಯ(ಉಷ್ಣ ಅಲೆ) ವಾತಾವರಣ ಹೆಚ್ಚಿತ್ತು. ನೆರೆಯ ಗುರ್ಗಾಂವ್ನಲ್ಲಿ ತಾಮಮಾನ 48 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ದೇಶದ ಇತರೆಡೆ ಬಿಸಿಲ ಝಳ ಹೆಚ್ಚಿದ್ದು, ಜನತೆ ಹೈರಾಣಾಗಿದ್ದಾರೆ. ಮನೆಯಿಂದ ಹೊರ ಬರಲೂ ಸಾಧ್ಯವಾಗದಷ್ಟು ಬಿಸಿಲು ಇತ್ತು. ಜಮ್ಮು ವಿಭಾಗ, ಹಿಮಾಚಲ ಪ್ರದೇಶ, ಪಶ್ಚಿಮ ರಾಜಸ್ಥಾನ ಮತ್ತು ಪಂಜಾಬ್‌ನ ಕೆಲವು ಭಾಗಗಳಲ್ಲಿ ಬಿಸಿ ಗಾಳಿಯ ವಾತಾವರಣ ಕಂಡುಬಂದಿದೆ.
PublicNext
16/05/2022 05:01 pm