ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಹುಲಿ ದಾಳಿಗೆ ರೈತ ಬಲಿ

ಮೈಸೂರು: ಮೈಸೂರಿನಲ್ಲಿ ಮತ್ತೊಂದು ಹುಲಿ‌ ದಾಳಿ ಪ್ರಕರಣ ನಡೆದಿದೆ. ನಾಗರಹೊಳೆ ಅಭಯಾರಣ್ಯದ ಮೇಟಿಕುಪ್ಪೆ ವಲಯದಲ್ಲಿ ರೈತನ ಮೇಲೆ ಎರಗಿದ ಹುಲಿ ಆತನನ್ನು ಕೊಂದು ಹಾಕಿದೆ.

ಹಿರೇಹಳ್ಳಿ ಬಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆಚ್ ಡಿ ಕೋಟೆ ತಾಲೂಕಿನ ಹಿರೇಹಳ್ಳಿ ಬಿ ಕಾಲೋನಿ ನಿವಾಸಿ ಮರಿಗೌಡ ಎಂಬ ರೈತ ಹುಲಿ ದಾಳಿಯಿಂದ ಮೃತಪಟ್ಟ ರೈತ. ದನ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಹುಲಿ ಮರಿಗೌಡ ಮೇಲೆ ದಾಳಿ ಮಾಡಿದೆ. ಕಳೆದ ಒಂದು ತಿಂಗಳಿಂದ ಹೆಚ್‌.ಡಿ.ಕೋಟೆಯ ಹಲವು ಭಾಗಗಳಲ್ಲಿ ಕಾಣಿಸಿಕೊಂಡ ಹುಲಿ ಜನರ ಮೇಲೆ ದಾಳಿ ನಡೆಸಿದೆ. ಆದರೆ ಕಾರ್ಯಾಚರಣೆ ವೇಳೆ‌ ಹುಲಿಯ ಗುರುತು ಪತ್ತೆಯಾಗಿಲ್ಲ.

Edited By : Nagaraj Tulugeri
PublicNext

PublicNext

22/01/2022 11:55 am

Cinque Terre

36.67 K

Cinque Terre

1