ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಹಾರ ಹುಡುಕುತ್ತ ಕಾಡಿನಿಂದ ನಾಡಿಗೆ ಬಂದ ಜೋಡಿ ಕರಡಿ

ಭುವನೇಶ್ವರ: ಆಹಾರ ಹುಡುಕುತ್ತ ಎರಡು ಕರಡಿಗಳು ಕಾಡಿನಿಂದ ನಾಡಿಗೆ ಬಂದಿವೆ. ಸಡನ್ನಾಗಿ ಕರಡಿಗಳನ್ನು ಕಂಡ ಗ್ರಾಮಸ್ಥರು ದಿಕ್ಕಾಪಾಲಾಗಿ ಓಡಿದ್ದಾರೆ. ಒಡಿಶಾದ ನಬ್ರಂಗ್ಪುರ ಜಿಲ್ಲೆಯ ಉಮರ್ ಕೋಟೆ ಬ್ಲಾಕ್‌ನ ಬುರ್ಜಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ತಾಯಿ ಕರಡಿ ಹಾಗೂ ಅದರ ಮರಿ ಹಸಿವಿನಿಂದ ಆಹಾರ ಹುಡುಕಿಕೊಂಡು ಹಳ್ಳಿಯೆಡೆಗೆ ಬಂದಿರುವುದಾಗಿ ಶಂಕಿಸಲಾಗಿದೆ. ಕಾಡಿಗೆ ಬಹು ಸಮೀಪವಿರುವ ಬುರ್ಜಾ ಗ್ರಾಮಕ್ಕೆ ಕರಡಿಗಳು ನುಗ್ಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಗ್ರಾಮಕ್ಕೆ ನುಗ್ಗಿದ ಕರಡಿಗಳು ಒಮ್ಮಿಂದೊಮ್ಮೆಲೆ ಮನೆಯೊಳಕ್ಕೆ ನುಗ್ಗಲು ಯತ್ನಿಸಿವೆ. ಅಲ್ಲಿನ ನಾಯಿಗಳು ಬೊಗಳಿ ಕರಡಿಗಳನ್ನೇ ಹೆದರಿಸಿವೆ. ಅಲ್ಲಿದ್ದ ಯುವಕನೋರ್ವ ಕೈಯಲ್ಲಿ ಬೆಂಕಿ ಹಿಡಿದು ಕರಡಿಗಳನ್ನು ಬೆದರಿಸಿ ಓಡಿಸಿದ್ದಾನೆ.

Edited By : Manjunath H D
PublicNext

PublicNext

21/01/2022 04:33 pm

Cinque Terre

55.81 K

Cinque Terre

0

ಸಂಬಂಧಿತ ಸುದ್ದಿ