ಚಿಕ್ಕಬಳ್ಳಾಪುರ: ನಗರದಲ್ಲಿ ಭೂಕಂಪನ ನಿಲ್ಲುತ್ತಲಿಲ್ಲ , ನಿರಂತರ ಭೂಕಂಪನಕ್ಕೆ ಜನ ಭಯಭೀತರಾಗಿದ್ದಾರೆ.
ತಾಲ್ಲೂಕಿನ ಶೆಟ್ಟಿಗೆರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪದೇ ಪದೇ ಭೂಕಂಪನದ ಅನುಭವವಾಗುತ್ತಿದೆ. ನಿನ್ನೆ ಸಂಭವಿಸಿದ ಭೂಕಂಪನದ ತೀವ್ರತೆ 2.6 ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು.
ರಾತ್ರಿ ಒಂದೇ ಸಮನೇ 8 ಭಾರಿ ಭೂಮಿ ಕಂಪಿಸಿದೆ. ಇದರಿಂದ ಮನೆಯ ಗೋಡೆಗಳು ಬಿರುಕುಬಿಟ್ಟಿವೆ. ಪದೇ ಪದೇ ಸಂಭವಿಸುತ್ತಿರುವ ಭೂಕಂಪನದಿಂದ ಜೀವಭಯದಿಂದ ಜನರು ಊರು ತೊರೆಯಲು ಮುಂದಾಗಿದ್ದಾರೆ.
PublicNext
06/01/2022 12:35 pm