ಅಂಕೋಲಾ(ಉತ್ತರ ಕನ್ನಡ ಜಿಲ್ಲೆ) ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಅಪರೂಪದ ಹೆಬ್ಬಾವು ಕಾಣಿಸಿಕೊಂಡಿದೆ. ಬರೋಬ್ಬರಿ 12 ಅಡಿ ಉದ್ದದ ಹೆಬ್ಬಾವು ನಡುರಸ್ತೆಯಲ್ಲೇ ಹೋಗುತ್ತಿರುವುದನ್ನು ಕಂಡ ಜನ ಹೌಹಾರಿದ್ದಾರೆ.
ಇದು ಇಂಡಿಯನ್ ರಾಕ್ ಪ್ರಭೇದದ ಹೆಬ್ಬಾವು ಎಂಬ ಮಾಹಿತಿ ಇದೆ. 12 ಅಡಿ ಉದ್ದ ಇರುವ ಹೆಬ್ಬಾವು 20 ಕೆ.ಜಿಗೂ ಅಧಿಕ ತೂಕವಿದೆ. ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಬಂದ ಉರಗ ಪ್ರೇಮಿ ಮಹೇಶ್ ನಾಯ್ಕ್ ಹೆಬ್ಬಾವನ್ನು ರಕ್ಷಿಸಿದ್ದಾರೆ. ಆರೋಗ್ಯಕರವಾಗಿರುವ ಹೆಬ್ಬಾವು ಆಹಾರ ಹುಡುಕಿಕೊಂಡು ನಾಡಿಗೆ ಬಂದಿರಬಹುದೆಂದು ಶಂಕಿಸಲಾಗಿದೆ. ಸುದ್ದಿ ತಿಳಿದ ಸ್ಥಳೀಯರು ಅತೀ ಉದ್ದದ ಹೆಬ್ಬಾವನ್ನ ವೀಕ್ಷಿಸಲು ಮುಗಿಬಿದ್ದಿದ್ದರು.
PublicNext
30/12/2021 09:23 pm