ಲಕ್ಷ್ಮೇಶ್ವರ: ಮುದ್ರಣ ಕಾಶಿ ಎಂದೆ ಪ್ರಸಿದ್ದಿ ಪಡೆದ ಗದಗ ಜಿಲ್ಲೆಯಲ್ಲಿ ಈಗ ವಿದೇಶಿ ಹಕ್ಕಿಗಳ ಕಲರವ ನೋಡಬಹುದು. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿ ಕೆರೆಯಲ್ಲಿ ಬಾನಾಡಿಗಳ ಕಲರವ ನೋಡುಗರ ಕಣ್ಮನ ಸೆಳೆಯುತ್ತವೆ.
ನವೆಂಬರ ಡಿಸೆಂಬರ್ ನಲ್ಲಿ ಬರುವ ಕೆಲ ವಿದೇಶಿ ಅತಿಥಿಗಳು ಬರೋಬ್ಬರಿ ಮೂರ್ನಾಲ್ಕು ತಿಂಗಳು ಇಲ್ಲೆ ಇದ್ದು ವಾಪಾಸ್ ಹೋಗುತ್ತವೆ. ಸಾವಿರಾರು ಸಂಖ್ಯೆಯಲ್ಲಿ ಬರುವ ಅತಿಥಿಗಳು ಇಲ್ಲಿಗೆ ಬಂದು ಏಂಜಾಯ್ ಮಾಡಿ ಹೋಗುತ್ತವೆ.
ಬಾನಂಗಳದಲ್ಲಿ ಚಿಲಿಪಿಲಿಗಳ ರಂಗೊಲಿ. ತಮ್ಮದೇ ಲೋಕದಲ್ಲಿ ತೇಲಾಡುವ ಬಾನಾಡಿಗಳು. ಒಮ್ಮೆ ದಡದಲ್ಲಿ ಮತ್ತೊಮ್ಮೆ ನೀರಲ್ಲಿ ಮಗದೊಮ್ಮೆ ಬಾನಲ್ಲಿ. ಎಲ್ಲೆಲ್ಲೂ ಈ ಚಿಲಿಪಿಲಿಗಳದ್ದೇ ಆಟ. ಪಕ್ಷಿ ಲೋಕದ್ದೇ ತುಂಟಾಟ. ಆಕಾಶದತ್ತ ಒಮ್ಮೆ ಕಣ್ಣು ಹಾಯಿಸಿದರೆ ಎಲ್ಲಿ ನೋಡಿದರು ಚಿಲಿಪಿಲಿ ಕಲರವ.
ದೂರದ ಊರಿನಿಂದ ಬಂದಿರುವ ವಿದೇಶಿ ಪಕ್ಷಿಗಳ ತುಂಟಾಟ ಆಡುತ್ತಿವೆ. ವರ್ಷದ ಕೊನೆಯಲ್ಲಿ ಬರುವ ಈ ಪಕ್ಷಿಗಳು ಮೂರು ತಿಂಗಳ ಕಾಲ ಮಾಗಡಿ ಹಾಗೂ ಶೆಟ್ಟಿ ಕೆರೆಯಲ್ಲಿ ಏಂಜಾಯ್ ಮಾಡುತ್ತವೆ.
PublicNext
12/12/2021 05:11 pm