ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾಮುಂಡಿ ಬೆಟ್ಟ ಅಕ್ಷರಶಃ ನಲುಗಿದೆ. ಕಳೆದೊಂದು ತಿಂಗಳಲ್ಲಿ ಮೂರು ಬಾರಿ ನಂದಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಭೂ ಕುಸಿತ ಉಂಟಾಗಿತ್ತು. ನಿನ್ನೆ ಮಧ್ಯಾಹ್ನದ ಬಳಿಕ ಸುರಿದ ಭಾರಿ ಮಳೆಗೆ, ನಾಲ್ಕನೇ ಬಾರಿಗೆ ಮತ್ತಷ್ಟು ಭೂಮಿ ಕುಸಿತಗೊಂಡಿದೆ.
ಮಳೆ ಇದೇ ರೀತಿ ಮುಂದುವರಿದರೆ ನಂದಿ ಮಾರ್ಗದ ರಸ್ತೆ ಸಂಪೂರ್ಣ ಕಣ್ಮರೆಯಾಗುವ ಆತಂಕ ಎದುರಾಗಿದೆ. ಈ ಹಿಂದೆಯಿಂದಲೂ ಸಂಚಾರ ಸುಗಮವಾಗಿಸಲು ದುರಸ್ತಿ ಕಾರ್ಯ ಮಾಡಲಾಗುತ್ತಿತ್ತು ಆದರೆ ಮತ್ತದೇ ಜಾಗದಲ್ಲಿ ಭೂ ಕುಸಿತವಾಗಿರುವುದರಿಂದ
ಮಳೆ ನಿಲ್ಲುವವರೆಗೂ ದುರಸ್ತಿ ಕಾಮಗಾರಿ ಮಾಡಲು ಅಸಾಧ್ಯವಾಗಿದೆ.
PublicNext
18/11/2021 11:45 am