ತುಮಕೂರು: ರಾಜ್ಯಾದ್ಯಂತ ಮಳೆರಾಯ ತನ್ನ ಅಟ್ಟಹಾಸ ಮುಂದುವರೆಸಿದ್ದಾನೆ. ಜಿಲ್ಲೆಯಲ್ಲೂ ನಿನ್ನೆ ರಾತ್ರಿ ಸುರಿದ ಮಳೆಯ ರಭಸಕ್ಕೆ ಸ್ವಲ್ಪದರಲ್ಲೇ ಆಗಬಹುದಾದ ದೊಡ್ಡ ದುರಂತವೊಂದು ತಪ್ಪಿದೆ.
ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಬೆಟ್ಟದ ಮಣ್ಣು ಮಳೆಗೆ ಸಡಿಲಗೊಂಡು ಇದ್ದಕ್ಕಿದಂತೆ ಬೆಟ್ಟದ ತಪ್ಪಲಿನಿಂದ ರಸ್ತೆಗೆ ಬೃಹತ್ ಬಂಡೆ ಉರುಳಿ ಬಂದಿದೆ. ಈ ಸಂದರ್ಭ ನೂರಾರು ಜನರು, ವಾಹನಗಳು ಸಂಚರಿಸುತ್ತಿದ್ದರೂ ಅದೃಷ್ಟವಶಾತ್ ರಸ್ತೆ ಬದಿಗೆ ಬಂಡೆ ಬಿದ್ದಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಮಧುಗಿರಿ ಎಸಿ ಸೋಮಪ್ಪ ಕಡಕೋಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
17/11/2021 09:29 am