ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿಯಲ್ಲಿ ಮಿತಿಮೀರಿದೆ ವಾಯು ಮಾಲಿನ್ಯ: ಸೂರ್ಯ ಕಾಣದಂತೆ ಆವರಿಸಿದೆ ದಟ್ಟ ಹೊಗೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಕಂಡಿರದ ವಾಯುಮಾಲಿನ್ಯ ಕಳೆದ ಮೂರು ದಿನಗಳಲ್ಲಿ ಕಾಣಿಸಿದೆ. ದೀಪಾವಳಿ ಸಂಭ್ರಮದಲ್ಲಿ ಜನ ಮಿತಿಮೀರಿ ಪಟಾಕಿ ಹಾಗೂ ಇನ್ನಿತರ ಸಿಡಿಮದ್ದುಗಳನ್ನು ಸಿಡಿಸಿದ್ದರಿಂದ ಈ ಮಟ್ಟಿಗೆ ವಾಯು ಮಾಲಿನ್ಯ ಆಗಿತ್ತು ಎನ್ನಲಾಗಿದೆ.

ಕೇವಲ ದೆಹಲಿ ಮಹಾನಗರ ಅಷ್ಟೇ ಅಲ್ಲ. ಉತ್ತರ ಭಾರತ ಹಾಗೂ ಮಧ್ಯಭಾರತದ ಹಲವು ಭಾಗಗಳಲ್ಲಿ ಗಾಳಿಯ ಗುಣಮಟ್ಟ ತೀವ್ರ ಪ್ರಮಾಣದಲ್ಲಿ ಎನ್ನಬಹುದಾದಷ್ಟು ಹದಗೆಟ್ಟ ಬಗ್ಗೆ ವರದಿಯಾಗಿದೆ. ದೆಹಲಿಯಲ್ಲಿನ ಈ ಮಾಲಿನ್ಯಕ್ಕೆ ನಗರದ ಸುತ್ತಲಿನ ಕೃಷಿ ತ್ಯಾಜ್ಯ ಸುಡುವಿಕೆಯ ಹೊಗೆಯೂ ಸೇರಿಕೊಂಡಿದೆ.

ದೆಹಲಿ-ಎನ್‌ಸಿಆರ್‌ ಪ್ರದೇಶದಲ್ಲಿ ಸೂರ್ಯನನ್ನು ಮರೆಮಾಚುವಂತೆ ದಿನವಿಡೀ ದಟ್ಟವಾದ ಹೊಗೆ ಆವರಿಸಿತ್ತು. ನಿನ್ನೆ ಶುಕ್ರವಾರ ನೆರೆಯ ನಗರಗಳಾದ ಫರಿದಾಬಾದ್, ಗ್ರೇಟರ್ ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್ ಮತ್ತು ನೋಯ್ಡಾದಲ್ಲಿ ನಿನ್ನೆ ಮಧ್ಯಾಹ್ನದ ವೇಳೆ ವಾಯು ಗುಣಮಟ್ಟ ಅಪಾಯದ ಮಟ್ಟ ತಲುಪಿತ್ತು.

Edited By : Manjunath H D
PublicNext

PublicNext

06/11/2021 12:48 pm

Cinque Terre

52.23 K

Cinque Terre

3